Saturday, 25 June 2022

ನೀ ನಾ


ನೀ ನಾ 

-----------------------------------------------

ನೀ ತೋರುವ ಪ್ರೀತಿಗೆ ನಾ ಬೇಡ  ಅನ್ನೇನ

ಅಮಾಸಿ ದಿನ ದುರಡಿ ಹೋಳಿಗೆ , ಬೊಗಾಣಿ ಅನ್ನ ಆ೦ಬ್ರ ಕಾಲಿಮಾಡಲಿಲ್ಲೆನ 


ನೀ ಮಾಡುವ ಮಾಯಕ ಮೈ ಮರೀಲಿಲ್ಲೇನ

ಕೊಬ್ಬರಿ ಎಣ್ಣೀ ಹಚ್ಚಿಸಿಕೊಂಡ ಎರಕೊಳ್ಳಲ್ಲಿಲ್ಲೆನ


ನೀ ಮಾಡುವ ಚೇಷ್ಟೆಗೆ ನಾ ಚಡಪಡಿಸಿದಿನೇನ 

ಇಬ್ಬರು ಕುಡಿ ಹೊಟ್ಟೆ ಹುಣ್ಣಾಗುವಂಗ ನಗಲ್ಲಿನೆನ


ನೀ ಬಂಗಾರ ಒಡವೆ ನೋಡಿ ಕೊರಳಕ್ಕ ಸೊಂಟಕ್ಕ ಕೈಯಾಡಸಿಲ್ಲಿಲ್ಲೆನ 

ಮರುದಿನ ಟಿಕ್ಕಿ ಸರ ಬೋರಮಾಳ ಡಾಬಾ ತರಲ್ಲಿಲ್ಲೆನ


ನೀ ಪಂಚಮಿಗೆ ಉಂಡಿ ಮಾಡಿ ದನಿಲ್ಲಿಲ್ಲೆನ 

ಕಡೆ ಪಾಟಿನ ಮನೆಗೆ ಜೋಕಾಲಿ ಕಟ್ಟಿ ತೂಗಲ್ಲಿಲ್ಲೆನ


ನೀ ತವರ್ಮನೆ ನೆನಸಿಕೊಳ್ಳಲ್ಲಿಲ್ಲೆನ 

ನಿನ್ನ ಹಡದವರು ಬಳುವಳಿಯಾಗಿ ಕೊಟ್ಟ ಆಕಳನ್ನ ಬ್ಯಾಡನ್ನೆನ 


ನೀ ಎದೇಮ್ಮಿನ ಹಿಂಡಲ್ಲಿಲ್ಲೆನ 

ಗಿಪ್ಪದಹಾಲಿನ ವಡಿ ಮಾಡಿಕೊಡಲಿಲ್ಲೇನ 


ನೀ ನಾ ಅಂದ ಜಗಳ ಮಾಡಲಿಲ್ಲೆನ  

ರಾತ್ರಿ ಹೊತ್ತು ಒಂದಾಗಲ್ಲಿಲ್ಲೆನ


                     --ಪ್ರಶಾಂತ್ ಸವದಿ



Thursday, 5 May 2022

ನಮ್ಮ ಕೆಂಪು ನಾಯಿ

 ನಮ್ಮ ಕೆಂಪು ನಾಯಿ

-----------------------------------

ರೊಟ್ಟಿ ,ನುಚ್ಚು , ಕಾಯಿ ಪಲ್ಲೆ , ಕುಟ್ಟಿದ ಮೆಣಸಿನ ಕಾಯಿ ,ಮೊಸರು ಹಾಗು ಮಜ್ಜಿಗೆ ಹೀಗೆ ಆ ದಿನದ ಅಡಿಗೆಯನ್ನ ಒಂದು ದೊಡ್ಡದಾದ ಬುಟ್ಟಿಯಲ್ಲಿ ಜೋಡಿಸಿಕೊಂಡು ಅವ್ವ ಮೆನೆಯ ಕೆಲಸ ಮುಗಿಯಿಸಿ , ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲಿ ತೋಟದ ಕೆಲಸಕ್ಕೆ ತಯ್ಯಾರಾಗುತ್ತಿದ್ದರು. ಅದನ್ನೆಲ್ಲಾ ಮನೆಯ ನಿಚ್ಚಣಗಿ ಮೇಲೆ ಕೂತು ಗಮನಿಸುತ್ತಾ ಕೂತಿರುತ್ತಿದ್ದೆ .

ರೊಟ್ಟಿಯ ಬುಟ್ಟಿ ಹುಲ್ಲಿ ಕಟ್ಟಿಗೆಯಿಂದ ಮಾಡಲ್ಪಟ್ಟಿರುತ್ತಿತ್ತು . ಅದರ ಜುಪಾದ ಎಲೆಗಳನ್ನ ಸವರಿ ಬಿಸಿಲಿಗೆ ಒನ ಹಾಕುತ್ತಿದ್ದರು. ಸರಿಯಾಗಿ ಒಣಗಿದ ಮೇಲೆ ಗರಿಗಳನ್ನ ಹೆಣೆದು ಬುಟ್ಟಿಮಾಡುತ್ತಿದ್ದರು . ಇದನ್ನೇ ಒಂದು ಕುಲ ಕಸಬು ಮಾಡಿಕೊ0ಡಿದ್ದ  ಕುಶಲ ಕರ್ಮಿಗಳು ಊರಲ್ಲಿದ್ದರು. ಅವ್ವ ಬುಟ್ಟಿಯ ಸುತ್ತಲೂ ಗೋವಿನ ಸೆಗಣಿಯಿಂದ ಸಾರಿಸಿ ಅದಕ್ಕೆ ಅಂದ ಚೆಂದವನ್ನ ಕೊಟ್ಟಿದ್ದರು.

 ಅವ್ವ ಹೊರಡಲು ಇನ್ನೇನು ಮನೆಯ ಹೊಸ್ತಿಲವನ್ನು ದಾಟುತ್ತಿದ್ದಂತೆಯೇ ,ನಾನು ಕೆಳಗೆ ಇಳಿದು ಅವ್ವನ ನೆರಳಿನಂತೆ ಬೆನ್ನು ಹತ್ತುತ್ತಿದ್ದೆ .

ಮ್ಯಾಲಕಿನ ತೋಟ ಊರಿಂದ ಸುಮಾರು ೨ ಕಿಲೋಮೀಟರು ದೂರ ;ಮನೆಯಿಂದ ಅನಾಯಸವಾಗಿ ನಡಿದೆ ಹೋಗುವ ದಾರಿ . ತೋಟವು ಊರಿನ ಮನೆಯ ಹಿಂದೆ ಅಂದರೆ ಸೂರ್ಯಾಸ್ತ್ರವಾಗುವ ಕಡೆಗೆ ಇರುವುದರಿಂದ ಮನೆಯವರು ಅದನ್ನ ಮ್ಯಾಲಕಿನಾ ತೋಟವೆಂದು ಹೇಳುತ್ತಿದ್ದರು. ತೋಟದ ಮನೆಯಿಂದ ಒಬ್ಬ ಅತಿಥಿ, ನಾವು ಇನ್ನೂ ಅರ್ಧ ಕಿಲೋಮೀಟರ್ ದೂರದಲ್ಲಿದ್ದಾಗಲೇ, ನಮ್ಮಣ್ಣನನ್ನು ನೋಡಲು ಓಡಿ ಬಂದಿರುತ್ತಿದ್ದ

. ಅದು ನಾವು ಆಗಮಿಸುತ್ತಿರುವುದು ಅವನಿಗೆ ಹೇಗೆ ಗೊತ್ತಾಗುತ್ತಿತ್ತೋ ?. ದೇವರೇ ಬಲ್ಲ! . ಬಾಲಲ್ಲಾಡಿಸುತ ಸುಮ್ಮನೆ ನಿಲ್ಲೋ ಪ್ರಾಣಿಯಲ್ಲ ಅದು . ಅವ್ವ ಹೊತ್ತಿರುವ ರೊಟ್ಟಿಯ ಬುಟ್ಟಿ ಮುಟ್ಟುವತನಕ ಜಿಗಿಯುತ್ತಿದ್ದ . ನೋಡಲು ಕೆಂಪು ಕೆಂಪಾಗಿ ಕಂಡು ಬರುತ್ತಿದ್ದರಿಂದ ಅವನನ್ನ ಕೆಂಪು ನಾಯಿ ಎಂದೇ ಮನೆಮಂದಿ ಕರೆಯುತ್ತಿದ್ದರು. ಕೆಣಕಿದರೆ ತೋಳವೇ ಸರಿ !.

ಅಪ್ಪಿ ತಪ್ಪಿ ಯಾರಾದರೂ "ಹಚ್ಯಾ!" ಎಂದು ಕಲ್ಲು ಎಸೆದರೆ — ಮುಗಿತು ಕಥೆ! ಎಸೆದ ಕಲ್ಲನ್ನು ಹುಡುಕಿ, ತನ್ನ ಚೂಪಾದ ಹಲ್ಲುಗಳಲ್ಲಿ ಹಿಡಿದು, ಆಕ್ರೋಶವನ್ನ ಗುರ್‌ ಎಂದು ಹೊರಹಾಕುತ್ತಿತ್ತು . ಮೆನೆಯವರೇ ಆಗಿದ್ದರೂ ಸಹ, ಎಸೆದ ಕಲ್ಲನ್ನು ಹುಡುಕಿ, "ಗುರ್" ಎಂದು ಗರ್ಜಿಸುತ್ತಲೇ ಕಚ್ಚಿ ಹಿಡಿಯುತ್ತಿತ್ತು . ಇದು ಅದರ ಒಂದು ವಿಶಿಷ್ಟ ಸ್ವಭಾವವಾಗಿತ್ತು .ನಮ್ಮ ತೋಟದ ಮನೆಯ ದನದ ಕೊಟ್ಟಿಗೆ ಹಾಗೂ ಸುತ್ತಮುತ್ತಲಿನ ಹೊಲಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ತನ್ನ ಮೇಲೇ ಸ್ವಯಂಘೋಷಿತವಾಗಿ ತೆಗೆದುಕೊಂಡಿದ್ದ ಜೀವವದು. ಹೀಗಾಗಿ ತೋಟದ ಮನೆಗೆ ಯಾರೇ ಬಂದರೂ, ಮೊದಲು ಅವನನ್ನು ಹಿಡಿದು ಒಂದು ಕಡೆ ಕಟ್ಟಿ, ನಂತರವೇ ಅತಿಥಿಗಳನ್ನು ಬರಮಾಡಿಕೊಳ್ಳಬೇಕಾಗುತ್ತಿತ್ತು.


ಮ್ಯಾಲಕಿನ ತೋಟದಲ್ಲಿ ಹೆಚ್ಚಾಗಿ ಬೆಳೆಯುತ್ತಿತ್ತು ಅರಿಶಿನ, ಇದು ನಮ್ಮ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದು. ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕಟಾವು ಮಾಡಲಾಗುತ್ತಿದ್ದು, ಮಣ್ಣಿನೊಳಗೆ ಹುದುಗಿರುವ ಬಂಗಾರವನ್ನು ಹೊರತೆಗೆಬೇಕಾಗುತ್ತಿತ್ತು.ಅರಿಶಿನವು ರೈತರ ಬಾಳಿಗೆ ಬಂಗಾರಕ್ಕಿಂತಲೂ ಬೆಲೆಯಾಯಿತು ಎನ್ನುವ ಕಾಲವದು. ಮಣ್ಣಿನಿಂದ ಅರಿಶಿನವನ್ನು ತೆಗೆಯುವುದು, ಕೋಲಾರದ ಘಣಿಯಿಂದ ಚಿನ್ನ ತೆಗೆಯುವ ಕೆಲಸದಷ್ಟೇ ಕಷ್ಟದಾಯಕವಾಗಿತ್ತು! ವಾರ್ಷಿಕ ಬೆಳೆಯಾದ ಕಾರಣದಿಂದಾಗಿ, ಅರಿಶಿನದ ಕಟಾವು ತುಂಬಾ ಶ್ರಮದಾಯಕವಾಗಿದ್ದು, ಕೆಲವೊಮ್ಮೆ ಮಿತಿಮೀರಿದ ಶಾರೀರಿಕ ಪರಿಶ್ರಮವನ್ನು ಬೇಡುತ್ತಿದ್ದದು.ಒಂದು ಬದಿಯ ಎರಡೂ ಕಡೆ ಅರಿಶಿನವು ಆಳವಾಗಿ ಇಳಿದಿರುತ್ತಿತ್ತು. ಇಂತಹ ಸಾವಿರಾರು ಬದಿಗಳು, ಮುನ್ನೂರೋ ಇಲ್ಲವೇ ಐನೂರೋ ಅಡಿಯಷ್ಟು ಉದ್ದವಿರುತ್ತವು. ಸಾಲನ್ನು ಹಿಡಿದು, ಎರಡು ಮುಖದ ಗುದ್ದಲಿನಿಂದ ಆ ಬದಿಗಳನ್ನು ಅಗೆದು, ಮಣ್ಣಿನಲ್ಲಿ ಹುದುಗಿರುವ ಅರಿಶಿನ ಪೆಂಟೆಯನ್ನು ಹೊರತೆಗೆದು ಹಾಕುವುದು ಎಂಟೆದೆಯ ಬಂಟನ ಕಠಿಣ ಕೆಲಸವಾಗಿತ್ತು. ಹಡ್ಡವರು(ಅಗೆಯುವವರು) ಮುಂದೆ ಹಡ್ದುತ್ತ ಹೋದಂತೆ , ಅವರನ್ನ ಹಿಂಬಾಲಿಸುತ್ತ ಅರಿಶಿನ ಪೆಂಟೆಯನ ಮುರಿದು , ಅರಿಶಿನ ಮತ್ತು ಅದರ ಬೀಜವನ್ನ ಬೇರ್ಪಡಿಸುತ್ತ ಗುಂಪು ಹಾಕೋ ಮತ್ತೊಂದಿಷ್ಟು ಆಳುಗಳು . ಅರಿಸಿನ ಚೆನ್ನಾಗಿ ಬಂದಿದ್ದರೇ , ಕೈ ಬೆರಳುಗಳಂತೆ ಕಂಡು ಭೂಮಿಯಲ್ಲಿ ಹುದುಗಿರುತ್ತಿದ್ದವು. ಅವುಗಳನ್ನ ಹನಿಗೇಗಳಂತೂ ಕರೆಯುತ್ತಿದ್ದರು .


ಹೀಗೆ ಗುಂಪಾಗಿ ಬಿದ್ದಿರೋ ಅರಿಶಿಣವನ್ನ ಚಕ್ಕಡಿಯಲ್ಲಿ ಸಾಗಿಸಿ ಅರಿಸಿನ ಒಲೆಯ ಹತ್ತಿರ ಇನ್ನೊಂದು ದೊಡ್ಡ ಗುಂಪು ಹಾಕೋದು . ಇದು ಸುಮಾರು ೧೦ ರಿಂದ ೧೫ ದಿನಗಳ ತೆಗೆದು ಕೊಳ್ಳುವ ಬಹಳ ಪರಿಶ್ರಮದ ಕೆಲಸವಾಗಿತ್ತು . ಇಲ್ಲಿಗೆ ಅರಿಶಿನವು ಸಾಂಗ್ಲಿ ಅಡತಿಗೆ ಹೋಗಿ ಬೀಳುವುದಿಲ್ಲ ; ಇನ್ನು ಬಹಳ ಕೆಲಸ ಉಳಿದಿರುತ್ತಿತ್ತು. ಹೀಗೆ ಬಿದ್ದಿರುವ ಅರಿಶಿಣವನ್ನ ದೊಡ್ಡದಾದ ಗಂಗಾಳದಲ್ಲಿ ಹಾಕಿ ನೀರಿನಲ್ಲಿಕುದಿಸಬೇಕಿತ್ತು. ಕತ್ತರಿಸಿ ಹಾಕಿದ್ದ ಅರಿಶಿನದ ತಪ್ಪಲೆ  ಊರವಲು ಆಗಿ ಉಪಯೋಗವಾಗುತ್ತಿತ್ತು .

 

ಎಷ್ಟೋ ಸಲ ಅವಸರದಲ್ಲಿ ತಪ್ಪಲನ್ನ ಒಲೆಯ ಒಳಗಡೆ ತಳ್ಳಲು ಹೋಗಿ ಜನ ಕೈ ಸುಟ್ಟುಕೊಂಡಿದ್ದು ಕೇಳಿ ಸ್ವಲ್ಪ ಜಾಗೂರುಕತೆಯಿಂದ ಕೆಲಸ ನಿರ್ವಹಿಸುತ್ತಿದ್ದರು . ಅರಿಶಿನವು ಎಷ್ಟು ಕುದ್ದರೆ ಸರಿ ಅನ್ನುವ ಲೆಕ್ಕಾಚಾರಗಳು ಗೊತ್ತಿರುವುದು ಬಹಳ ಮುಖ್ಯವಾಗಿತ್ತು . ನುರಿತ ಅನುಭವಿಯು,ಅವಾಗ ಅವಾಗ ಅರಿಶಿಣವನ್ನ ಹಿಚುಕಿ ನೋಡಿ ಗಂಗಾಳವನ್ನ ಇಳಿಸೋ ಸೂಚನೆಯನ್ನ ಬೇರೆಯರಿಗೆ ಕೊಡುತ್ತಿದ್ದ . ಹೀಗೆ ಅರಿಸಿನ ಕುದ್ದಮೇಲೆ ಅದನ್ನ ಬೇರೊಂದು ಕಡೆ ಹರಡುಬೇಕಿತ್ತು . ಅಜಮಾಸು ಒಂದು ವಾರ ಬಿಸಿಲಿಗೆ ಒಣಹಾಕಬೇಕಿತ್ತು . ಸಂಪೂರ್ಣ ಒಣಗಿದಮೇಲೆ ಅವುಗಳನ್ನ ಹೊಳಪು ಮೂಡಿಸಲು ಗಾಡದಲ್ಲಿ ಹಾಕಿ ಮೇಲೆ ಕೆಳಗೆ ಮಾಡಿ ಸುತ್ತಬೇಕಿತ್ತು . ಗಾಡವು ಒಂದು ಬ್ಯಾರೆಲ್ . ಅದರಲ್ಲಿ ರಂದ್ರಗಳನ್ನ ಮಾಡಲಾಗಿರುತ್ತಿತ್ತು . ಒಳಗಡೆ ಹರಿತವಾದ ಕಬ್ಬಿಣದ ಹಲ್ಲುಗಳು, ಗಾಡವನ್ನ ತಿರುವುತ್ತಾ ಹೋದಂತೆ ,ಒಣಗಿದ ಅರಿಶಿನಗಳು ಈ ಹಲ್ಲುಗಳಿಗೆ ಒಂದೇಸಮನೆ ತಿಕ್ಕಿ ತಿಕ್ಕಿ ಮೇಲಿನ ಪದರು ಉದುರಿ ಹೋಗಿ ಬಂಗಾರದ ಬಣ್ಣಕ್ಕೆ ತಿರುಗುತ್ತಿದ್ದವು . ಹಗಲು ರಾತ್ರಿ ಗಾಢ ತಿರುಗಿಸುವುದರಿಂದ ಅಂಗೈಯಲ್ಲಿ ಹುಣ್ಣುಗಳು ಹುಟ್ಟಿದ್ದು ಹಳದಿ ಬಣ್ಣದಿಂದ ಮರೆಯಾಗಿ ಕಂಡುಬರುತ್ತಿರಲಿಲ್ಲ.     ಅಲ್ಲಿಗೆ ಅವುಗಳ್ಳನ್ನ ಒಂದು ಮುಂಬೈ ಚಿಲಿನಲ್ಲಿ ಹಾಕಿ ಬೇರೊಂದು ಕಡೆ ಇಟ್ಟು ಮುಂದಿನ ಗಾಡಕ್ಕೆ ತಯ್ಯಾರಿ ಮಾಡಿಕೊಳ್ಳಲಾಗುತ್ತಿತ್ತು . 


ಒಂದರಮೇಲೊಂದು ಅರಿಶಿನದ ಚಿಲುಗಳನ್ನ ಮಾವಿನ ಮರದ ಕೆಳಗಡೆ ಇಡಲಾಗಿತ್ತು . ಇವೆಲ್ಲವೂ ಸಾಂಗಲಿ ಅಡತಿಗೆ ಹೋಗಲು ಒಂದು ಒಳ್ಳೆ ಧಾರನಿಗೆ ಕಾಯುತ್ತಿದ್ದವು . ಸಾಂಗಲಿಯು ನೆರೆಯ ಮಹಾರಾಷ್ಟ್ರ ರಾಜ್ಯದ ಒಂದು ತಾಲೂಕು ಪಟ್ಟಣವಸ್ಟೇ ಅಲ್ಲ , ಅದು ಸುತ್ತಮುತ್ತಲಿನ ಸುಪ್ರಸಿದ್ದ ವಾಣಿಜ್ಯ ಕೇಂದ್ರವಾಗಿತ್ತು. ತೋಟದ ಕೆಳಭಾಗಲ್ಲಿ ಒಂದು ದೊಡ್ಡದಾದ ಒಡ್ದು. ಮಳೆಗಾಲದಲ್ಲಿ ಸುರಿದ ಮಳೆ ಈ ಬದಿಯಿಂದ ಹರಿದು ಮುಂದೆ ಹಳ್ಳ ಸೇರುತ್ತಿತ್ತು . ಬದಿಯು ದೊಡ್ಡದಾಗಿದ್ದು ಫಲವತ್ತಾದ ಮಣ್ಣಿನಿಂದ ತುಂಬಿಕೊಂಡಿರುವುದರಿಂದ ಅದರ ಎಡ -ಬಲ ಗಿಡ-ಗಂಟಿಗಳಿಂದ ,ಮರಗಳಿಂದ , ಬಿದಿರು ಬೆಟ್ಟಗಳಿಂದ ದಟ್ಟವಾಗಿ ಕಂಡು ಒಂದು ಸಣ್ಣ ಅರಣ್ಯ ಕಂಡಂತೆ ಹಸಿರುನಿಂದ ಕಂಗೊಳಿಸುತ್ತಿತ್ತು. ಒಂದು ಮೂಲೆಯಲ್ಲಿ ಎರಡು ಮಾವಿನ ಮರಗಳು ೫೦ ಮೀಟರ್ ದೂರದ ಅಂತರದಲ್ಲಿ ಬೆಳೆದು ನಿಂತ್ತಿದ್ದವು . ಅವುಗಳ ಹಣ್ಣುಗಳ ರುಚಿ ಆಧಾರದ ಮೇಲೆ ಮರಗಳಿಗೆ ಹೆಸರು ಬಂದಿದೆ . ಸಕ್ಕರೆತಿಂದಷ್ಟು ಸಿಹಿಯಾಗಿರುವ ಮಾವಿನ ಮರವನ್ನ ಸಕ್ಕರೆ ಮಾವು ಎಂದು ಹಾಗು ಗೌರಿ ಹುಣ್ಣುಮೆಗೆ ಮಾವುಬಿಡುವ ಮರವನ್ನ ಗೌರಿಮಾವು ಎಂದು ಮನೆಯವರು ಹೆಸರಿಟ್ಟಿದ್ದರು.


ನಮ್ಮ ಮೆನೆಯ ಮಕ್ಕಳ ಸೈನ್ಯವೆಲ್ಲ ಈ ಮಾವುಗಳ ಅಡಿಯಲ್ಲೇ ಬಾಲ್ಯವನ್ನ ಕಳೆದದ್ದು. ಪ್ರತಿ ವರ್ಷ ಮಾವಿನ ಕಾಯಿಗಳಿಂದ ಮರಗಳ ಟೊಂಗೆಗಳು ಭಾರದಿಂದ ಜೋತು ಬೀಳುತ್ತಿದ್ದವು.ಹಸಿ ಮಾವಿನ ಕಾಯಿ ಮತ್ತು ಉಪ್ಪು ;ಬಾಯಲ್ಲಿ ನೀರು . ಸಾವಿರಾರು ಮಾವುಗಳನ್ನ ಕೊಡುವ ಮರಗಳು . ಮಕ್ಕಳಿಗೆಲ್ಲ ಒಂದು ಸುಗ್ಗಿಯ ಕಾಲ ಇದು . ಯಾವುದಾರೊಂದು ಮಾವು ಕೆಳಗೆ ಬಿದ್ದಿತ್ತಂದರೆ ಅದನ್ನ ಒತ್ತಿ ಒತ್ತಿ ನೋಡಿ ಹಣ್ಣಿಗೆ ಬಂದಿದೆಂದು ಖಚಿತಪಡಿಸಕೊಳ್ಳಬೇಕಿತ್ತು. ಯಾವುದಾದರೊಂದು ಅರೆಹಣ್ಣು ಕಂಡರೆ ಇಡೀ ಮಾವಿನ ಮರದ ಹಣ್ಣುಗಳು ಹಣ್ಣಿಗೆಬಂದಂತೆ .ಅರೆಮಾವಿನ ಹಣ್ಣನ್ನ ಪಾಡಗಾಯಿ ಅನ್ನುತ್ತಿದ್ದರು . ಮನೆಯ ಅಜ್ಜಿಗೆ ತೋರಿಸಿದಮೇಲೆ ಅದನ್ನ ಅವರು ಪಾಡಗಾಯಿಯೆಂದು ಖಚಿತಪಡಿಸುತ್ತಿದ್ದರು .


ಮನೆಯವರು ಮಾವಿನಕಾಯಿಗಳನ್ನ ಹರಿಯಿವುದು ಅಷ್ಟು ಸುಲಭವಾಗಿರಲಿಲ್ಲ. ಮರಗಳು ಎತ್ತರವಾಗಿರುವುದರಿಂದ ಹಾಗು  ರೆಂಬೆ -ಟೊಂಗೆಗಳಿಂದ ಮಾವುಗಳನ್ನ ಹರಿದು ಕೆಳಗೆ ಕೊಡುವುದು ಅಷ್ಟೊಂದು ಅನಾಯಸದ ಕೆಲಸವಾಗಿರಲಿಲ್ಲ . ಕಾಯಿಗಳನ್ನ ಕೆಳಗೆ ಇಳಿಸುವಾಗ ಪೆಟ್ಟಾದರೆ ಹಣ್ಣಾಕಿದಮೇಲೆ ಕೊಳೆತು ಹೋಗುತ್ತಿದ್ದವು. ನಾಜೂಕಿನ ಕೆಲಸವಾದುದರಿಂದ  ಊರಿನಲ್ಲಿ ಒಂದೆರಡು ಮನೆತನಗಳು ಇದನ್ನ ಕುಲಕಸುಬಾಗಿ ಮಾಡಿಕೊಂಡಿದ್ದರು . ಈ ಕೆಲಸದಲ್ಲಿ ತೊಡಗಿರುವವನ್ನ ಮಾವಿನ ಕಾಯಿ ಇಳಿಸುವವ ಎಂದು ಕರೆಯುತ್ತಿದ್ದರು . ಮಾವುಗಳನ್ನ ಇಳಿಸುವ ಪರನಿತರು ತಮ್ಮದೇಯಾದ ಉಪಕರಣಗಳನ್ನ ಹೊಂದಿದ್ದರು . ಒಂದು ಉದ್ದನೆಯ ಬಿದಿರಿನ ಗಳ;ಅದರ ಮುಂದೆ ಒಂದು ತೆಳುವಾದ ವೃತ್ತಾಕಾರದ ಕಬ್ಬಿಣ ಮತ್ತು ಅದರ ಸುತ್ತುವರೆದ ಬೊಗಸೆ ಆಕಾರದ ನಾರಿನಿಂದ ಮಾಡಿದೆ ಜಾಳಿಗೆ . ಇದರಿಂದ ಮಾವನ್ನ ಎಳೆದು ಮರದ ತುಂಬಿನಿಂದ ಬಿಡಿಸಿ , ಜಾಲದಲ್ಲಿ ಹಿಡಿಯುವುದು . ಇದು ಒಂದು ಹಂತ . ಇದಾದ ಮೇಲೆ ಮಾವುಗಳನ್ನ ಜಾಳಿಗೆಯಿಂದ ತೆಗೆದು ಇನ್ನೊಂದು ದೊಡ್ಡದಾದ ನಾರಿನಿಂದ ಮಾಡಿದೆ ಜಾಳಿಗೆ ಹಾಕುವುದು . ದೊಡ್ಡ ಜಾಳಿಗೆ ತುಂಬಿದ ಮೇಲೆ ಅದನ್ನ ಕೆಳಗೆ ನಿಧಾನವಾಗಿ ಇಳಿಸುವುದು . ಕೆಳಗೆ ನಿಂತಿರುವವರು ಅದನ್ನ ಬೇರೆ ಕಡೆ ಎಳೆದು ಗುಂಪು ಹಾಕೋದು . ಗೋದಿ ಹುಲ್ಲನ್ನ ಬೇಕಾದಷ್ಟು ಬಳಿಸಿ ಮಾವುಗಳನ್ನ ಹಣ್ಣಾಗಿಸುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿತ್ತು . ಕಾಯಿಗಳು ಹಣ್ಣಾಗುತ್ತಿದ್ದಂತೆ ಮನೆಯಲ್ಲ ಮಾವಿನ ವಾಸನೆ ಪಸರಿಸುತ್ತಿತ್ತು.


ಅರಸಿನ ರಾಶಿ ಆದಮೇಲೆ ಚಿಲುಗಳನ್ನ ಗೌರಿ ಮಾವಿನ ಮರದ ಕೆಳಗೆ ಒಟ್ಟಲಾಗುತ್ತಿತ್ತು. ತುಂಬಾ ಬೆಲೆಬಾಳುವ ಬದುಕು ಆದುದರಿಂದ ರಾತ್ರಿ ಕಳ್ಳರ ಹಾವಳಿ . ಕಾವಲು ಕಾಯಲು ದೊಡ್ಡಪ್ಪ ಮತ್ತು ಚಿಕ್ಕಪ್ಪ ಮರದ ಕೆಳಗೆ ಮಲಗಿರುತ್ತಿದ್ದರು. ಒಂದು ದಿನ ಘಾಡ ನಿದ್ರೆಯಿಂದ ಚಿಕ್ಕಪ್ಪ ಮತ್ತು ದೊಡ್ಡಪ್ಪ ಪಕ್ಕದಲ್ಲಿ ಮಲಗಿದ್ದ ನಾಯಿಯ ಬೊಗುಳುವಿಕೆಯಿಂದ ಎದ್ದರು . ಹಾಗೇನೇ ಪಕ್ಕದಲ್ಲಿದ್ದ ಟಾರ್ಚ್ ನ್ನ ನಾಯಿ ಬೊಗುಳುವ ದಿಕ್ಕಿಗೆ ಹಿಡಿದರು . ನಾಯಿ ತನ್ನ ಎರಡು ಕಾಲುಗಳ್ಳನ ಮುಂದೆ ಮಾಡಿ ಜೋರಾಗಿ ಹಾವಿನ ಕಡೆಗೆ ಬೊಗಳುತ್ತಿತ್ತು . ತಕ್ಷಣ ಎಚ್ಚೆತ್ತ ಅವರು ಹಾವನ್ನ ಹೊಡೆದು ಹಾಕಿ ತಮ್ಮ ಪ್ರಾಣವನ್ನ ಕಾಪಾಡಿದ ಶ್ವಾನಕ್ಕೆ ಶರಣೆಂದರು . 


ನಮ್ಮ ಮನೆಯ ಸುತ್ತ-ಮುತ್ತ ಯಾವ ಪ್ರಾಣಿಯಾಗಲಿ ಮನುಶ್ಯರಾಗಲಿ  ಸುಳಿದಾಡುತ್ತಿರಲಿಲ್ಲ. ಒಂದೊಮ್ಮೆ ಸನಿಹ ಬಂದರೆ ಅವರಿಗೆ ಗ್ರಹಚಾರ ಕಾದಿದೆ ಅಂತಲೇ ಹೇಳಬೇಕಿತ್ತು . ನಾಯಿಗೆ ದಿನಾಲೂ  ಗೋವಿನ ಜೋಳದ ನುಚ್ಚು ಹಾಲು ಅಚ್ಚು ಮೆಚ್ಚು. ಆಗಾಗ ಜೋಳದ ರೊಟ್ಟಿ ಕತ್ತರಿಸಿ ತಿನ್ನಲು ಬೇಕಿತ್ತು. ನಾಯಿಗೆ ನಮ್ಮ ಮನೆಯ ಎತ್ತುಗಳೆಂದರೆ ಬಲು ಪ್ರೀತಿ .ಕೆಂಪೆತ್ತು ಅಷ್ಟೇನು ಎತ್ತರವಿರಲ್ಲಿಲ . ಕುಳ್ಳಾಗಿ ಕಂಡರೂ ಅದರ ಶಕ್ತಿಗೆ ಯಾವೂರು ಎತ್ತುಗಳಿಗೆ ಸಮವಿರಲಿಲ್ಲ. ಹಾಗೇನೇ ಬಲು ಮುಂಗೋಪಿ . ಒಮ್ಮೆ ಸಿಟ್ಟಿನಿಂದ ಮೂಗುದಾರ ಜಗ್ಗಿ ಹಿಂದೆ ಸರಿತೆಂದರೆ ಆಯಿತು ಆವತ್ತಿನ ಊಳುಮೆ ಕೆಲಸ ನಿಂತಂತೆ . ಹಾಗಂತ ಬೇಕಾಬಿಟ್ಟಿಯಾಗಿ ವರ್ತಿಸೋ ಸ್ವಭಾವ ಕೆಂಪೆತ್ತಿನದಲ್ಲ. ಬಿಳಿ ಎತ್ತು ಸುಮಾರಾಗಿ ಎತ್ತರ, ಬಣ್ಣ ಬಿಳುಪು . ಮೂಲತಃ ಸಂಭಾವಿತ . ಕೆಂಪತ್ತನ್ನ ಮುಂದೆ ನಡೆಸಿಕೊಂಡು ಹೋಗುವ ಹಿರಿಯ . ಎರಡು ಜೋಡೆತ್ತುಗಳು ಮನೆಗೆ ಬಂದಿದ್ದುರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು . ಕೆಂಪೇತ್ತಿನ ಕಾಲಲ್ಲಿ ಲಕ್ಷ್ಮಿ ಬಿಳಿಎತ್ತಿನ ಕಾಲಲ್ಲಿ ಅಣ್ಣ ಇದೆ ಅನ್ನೋದನ್ನ ದೇವರ ಹೇಳುವವರು ಹೇಳಿದ್ದರಂತೆ . ಹೀಗಾಗಿ ಅವುಗಳನ್ನ ಮಾರುವ ಗೋಜಿಗೆ ಮನೆಯವರು ಹೋಗಿರಲಿಲ್ಲ . 


 ಎಲ್ಲಾದರೂ ಚಕ್ಕಡಿ ಗಾಡಿ ಹೂಡಿಕೊಂಡು ಹೊರಟರೆ ಸಾಕು ತಾನು ಸಹ ಯಾವುದೊ  ಜವಾಬ್ದಾರಿ ಹೊತ್ತುಕೊಂಡ ನಡೆದ ಮನೆಯ ಯಜಮಾನಂತೆ ಗಂಭೀರವಾಗಿ ಚಕ್ಕಡಿಯನ್ನ ಹಿಂಬಾಲಿಸುತ್ತಿತ್ತು ಕೆಂಪು ನಾಯಿ. ಯಾರಾದರೂ ಚಕ್ಕಡಿ ಹತ್ತಿರ ಬಂದರೆ ಸಾಕು ಗುರ್ರ್ ಅನ್ನುತ್ತಿತ್ತು . ಮದ್ಯಾಹ್ನದ ಬುತ್ತಿಯಲ್ಲಿ ಅದಕ್ಕೂ ಪಾಲಿರುತ್ತಿತು. ಹೊಲದ ಊಳುಮೆ ಮುಗಿದ ಮೇಲೆ ಮತ್ತೆ ಚಕಿಡಿಯನ್ನ ಹಿಂಬಾಲಿಸುತ್ತ ತೋಟದ ಮನೆಗೆ ಹೆಜ್ಜೆ ಹಾಕುತ್ತಿತ್ತು. ಊರು ಸಮೀಪಿಸುತ್ತ ಬಂದರೆ ಭಯ!. ಎಲ್ಲಾದರೂ ಊರ ಬೀದಿನಾಯಿಗಳು ಕಾಳಗಕ್ಕೆ ಇಳಿದು ನಮ್ಮ ನಾಯಿಯನ್ನ ಕಚ್ಚುತ್ತವೆ ಅನ್ನೋದೊಂದು ದುಗುಡ. ನಮ್ಮ ನಾಯಿ ಕಿಲಾಡಿ. ಊರು ಬರುತ್ತಿದ್ದಂತೆ  ಜೋರಾಗಿ ಓಡಿ ಹೋಗಿ ಊರಬಿಟ್ಟು ದೂರದಲ್ಲಿ ಚಕ್ಕಡಿ ಗಾಡಿಗಾಗಿ ಕಾಯುತ್ತಿತ್ತು.



ಕೆಂಪು ನಾಯಿ  ದೊಡ್ಡಪ್ಪ ಹಾಗು ಚಿಕ್ಕಪ್ಪನ ಜೀವ ಉಳಿಸಿದ್ದು ನಮ್ಮ ಮನೆತನದಲ್ಲಿ ಅಳಿಯದೆ ಉಳಿದ ಅಜ್ಜಾಗಿತ್ತು . ಹೀಗಿರಬೇಕಾದರೆ ಒಂದು ದಿನ ಅರಿಸಿನ ಕುದಿಸಿದಮೇಲೆ ಮನೆಯ ನೆರೆಯವರು ಅರಿಶಿನ ಒಲೆಯಲ್ಲಿರುವ ಬೂದಿ ಮಿಸ್ತ್ರಿತ ಬೆಂಕಿಯ ಕೆಂಡವನ್ನ ಒಂದು ಕಡೆ ಹರವಿದ್ದರು. ಮನೆಯ ಪಕ್ಕದಲ್ಲೇ ಇರುವುದರಿಂದ ಸಣ್ಣ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿತ್ತು . ಹೊರಗಡೆಯಿಂದ ನೋಡಿದರೆ ಬೂದಿ ;ಒಳಗಡೆ ನಿಗಿ ನಿಗಿ ಕೆಂಡ . ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಆ ದಿನ ತಮ್ಮ ಅಂದರೆ ದೊಡ್ಡಪ್ಪನ ಮಗ ಆಡುತ್ತ ಸೈಕಲ್ ಟೈರ್ ಗಾಲಿಯನ್ನ ಬೂದಿ ಮುಚ್ಚಿದ ಕೆಂಡದಲ್ಲಿ ಕೆಡುವುತ್ತಾನೆ . ಏನು ತಿಳಿಯದ ಮಗು ಒಂದೇ ಸಮನೆ ನೇರವಾಗಿ ಬೂದಿಯಲ್ಲಿ ನಡೆಯುತ್ತಾನೆ . ಬೆಂಕಿಯ ಕೆಂಡದಿಂದ ಅವನ ಕಾಲುಗಳು ಸುಡಲಾರಂಭಿಸುತ್ತವೆ . ಒಂದೇ ಸಮನೆ ಅಳುತ್ತ ಚೀರುತ್ತಾ ಇದ್ದರು ಯಾರು ಅಲ್ಲಿ ಸುಳಿಯಲಿಲ್ಲ. ಮೊದಲೇ ತೋಟದ ಮನೆಆದುದರಿಂದ ಜನ ಬಲು ವಿರಳ. ಅಷ್ಟರಲ್ಲೇ ಮನೆಯ ನಾಯಿ  ಆಗಿರುವ ಅನಾಹುತವನ್ನ ಗಮನಿಸುತ್ತಲೇ ಒಂದೇ ಸಮನೆ ಮಗುವನ್ನ ಅಲ್ಲಿಂದ ಹೊರಗೆ ತರಲು ಆಕಡೆ ಯಿಕಡೆ ಚಿಕ್ಕದಾಗಿ ಬೊಗಳುತ್ತ ಚಡಪಡಿಸುತ್ತದೆ. ತನ್ನಕಡೆಯಿಂದ ಆಗದ ಕೆಲಸವೆಂದು ತಿಳಿದು ಮನೆಯ ಯಜಮಾನನ ಕಡೆಗೆ ಓಡುತ್ತದೆ . ಸಮಯ ಬಹಳ ಕಡಿಮೆ . ಹೆಚ್ಚು ಕಡಿಮೆ ಆದರೆ ಮಗುವಿನ ಪ್ರಾಣಕ್ಕೆ ಸಂಚು ಕಾದಿತ್ತು. ನಮ್ಮ ಚಿಕ್ಕಪ್ಪ ಮನೆಯ ಮುಂದಿನ ಬದಿಯನ್ನು ದಾಟಿ ಕೈಯಲ್ಲಿ ಚಂಬು ಹಿಡಿದು ಬಯಲುಕಡೆಗೆ ಹೊರಟಿದ್ದಿರು . ಹಿಂದಿನಿಂದ ಯಾರೋ ಜೋರಾಗಿ ಬಂದಂತೆ ಅನಿಸಿ ಹಿಂದಿರುಗುವಸ್ಟರಲ್ಲಿ ನಾಯಿ ಒಮ್ಮಿಂದಲೇ ಅವರ ಕೈಯಲ್ಲಿದ್ದ ಚೊಂಬಣ್ಣ ಚೆಲ್ಲಿತು . ಅದು ಅವರಿಗೆ ಏನೋ ಕೇಡಾಗಿದೆ ಬೇಗ ಬನ್ನಿ ಅನ್ನೋ ಸೂಚನೆ ಕೊಟ್ಟಂತಿತ್ತು . ಅವರು ನಾಯಿಯನ್ನ ಹಿಂಬಾಲಿಸುತ್ತ ಮನೆ ಕಡೆಗೆ ಓಡಿದರು. ಮಗುವಿನ ಗೋಳಾಟ ನೋಡಿ ಗಾಬರಿಯಿಂದ ಒಮ್ಮಿಂದಲೇ ಮಗುವನ್ನ ಬೂದಿ ಮುಚ್ಚಿದ ಕೆಂಡದಿಂದ ಹೊರತೆಗೆದರು . ದಿಗ್ಬ್ರಮೆಯಿಂದಲೇ ಆದಷ್ಟು ಬೇಗ ದವಾಖಾನೆ ಕರೆದೊಯ್ದು ಸುಟ್ಟ ಗಾಯಗಳಿಕೆ ಚಿಕಿಸ್ತೆ ಕೊಡಿಸಿದರು. ಆದ ಘಟನೆಯನ್ನ ಚಿಕ್ಕಪ್ಪ ಕಥೆಮಾಡಿ ಮನೆಮಂದಿಗೆ ಹೇಳುತ್ತಿದ್ದಂತೆ ಮನೆಮಂದಿಗೆಲ್ಲ ನಾಯಿಯು ದೈವೀ ಸ್ವರೂಪವಿದ್ದಂತೆ ಕಂಡಿತು.


ಒಂದು ದಿನ ಅವ್ವ ಕಳವಳದಿಂದ ನಾಯಿಯನ್ನು ಬಯ್ಯುತ್ತ " ಹಾಟ್ಯಾಂದು  ಎಲ್ಲ ಹಾಳಾಗೋಯ್ತೋ ?. ಎರಡು ದಿನದಿಂದ ಊಟಕ್ಕಬಂದಿಲ್ಲ! " ಅನ್ನುತ ಗಾಬರಿ ಯಿಂದ ಖಿನ್ನತೆಯನ್ನು ಹೊರಹಾಕುತ್ತಿದ್ದರು . ಅವ್ವನ ಕಳವಳಕ್ಕೂ  ಕಾರಣವಿತ್ತು . ಯಾವತ್ತೂ  ಮನೆ ಸುತ್ತ ಮುತ್ತ , ದನದ ಕೊಟ್ಟಿಗೆ ಹತ್ತಿರ ಕಾಣುವ ನಾಯಿಯು ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಬೆದಿಗೆ ಬಂದ ಹೆಣ್ಣಾಯಿಯ ಬೆನ್ನು ಹತ್ತಿ  ಎಲ್ಲಿಗೆ ಬೇಕೊ ಅಲ್ಲಿಗೆ ಓಡಾಡಿತ್ತುದೆಯಂತ ಮನೆ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು . ಕೆಲವು ದಿನಗಳ ನಂತರ ನಾಯಿಯು ಮನೆ  ಸುತ್ತ ಪ್ರತ್ಯಕ್ಷವಾಯಿತು . ಆದರೆ ಅದು ಮೊದಲಿನ ತರಹ ಇರಲಿಲ್ಲ . ಒಂದು ಕಿವಿಯನ್ನ ಕೆಳಗೆ ಮಾಡಿ ಅತ್ತಿತ್ತ ಓಡುತ್ತಿತ್ತು .


ಮನುಷ್ಯರೇ ಹೀಗೆ ಎಲ್ಲ ಪ್ರಾಣಿಗಳಿಗಿಂತ ತಾನು ಶ್ರೇಷ್ಠ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾನೆ . ಎಲ್ಲವೂ ಸರಿಯಿದ್ದರೂ ತನ್ನ ದುರಾಶೆಗೆ ಸಿಕ್ಕವರ ಮನೆಗೆ ಕೊಳ್ಳಿಯಿಡುತ್ತಾನೆ . 

ನಾಯಿಯು ಒಂದು ಹಂತಕ್ಕೆ ಹುಚ್ಚು ಹಿಡಿದಿದ್ದರು ಸಹಿತ ಸುತ್ತಲಿರುವ ಜನಕ್ಕೆ ಕಚ್ಚಿದಿಲ್ಲ . ತನ್ನ ರೋದನೆಯೊಂದಿಗೆ ಓಡಾಡುತ್ತಿತ್ತು . 


ಊರಲ್ಲಿ ಬೇರೆ ಬೇರೆ ತೋಟಗಳು ಇದ್ದರು ಸಹ ಮೇಲಕಿನ ತೋಟ ನಮ್ಮನೆಲ್ಲ ಕೈ ಬಿಸಿ ಕರೆಯುತ್ತಿತ್ತು . ಒಂದು ದಿನ ತೋಟದ ಮನೆಯ ಹತ್ತಿರ ಸಮೀಪೂಸುತ್ತಿದ್ದಂತೆ ಅಲ್ಲಿ ನಾನು ಒಂದು ಘಟನೆಗೆ ಸಾಕ್ಸಿಯಾದೆ . ನಾಯಿಯು ತನ್ನ ಪಾಡಿಗೆ ಚಿಕ್ಕಪ್ಪನ ಹತ್ತಿರ ನಿಂತಿತ್ತು . ಅದಕ್ಕೆ ಚಿಕ್ಕಪ್ಪ ಅಂದ್ರೆ ಬಲು ಪ್ರೀತೀ . ಅಷ್ಟೇನು ದೊಡ್ಡದಲ್ಲದ ಬನ್ನಿ ಮರಕ್ಕೆ ಹಗ್ಗ ಹಾಕುತ್ತಿದ್ದರು . ನಾನು ಹತ್ತಿರ ಹೋದಂತೆ ಬರ ಬೇಡವೆಂದು ಸನ್ನೆ ಮಾಡಿದರು . ಅವರ ಮುಖದಲ್ಲಿ ಅಷ್ಟೇನು ಖುಷಿ ಇರಲಿಲ್ಲ ;ಚಿಂತೆಯಲ್ಲಿ ಜಾರಿದ್ದರು . ಅವರು ತಮಗೆ ತೋಚಿದಂತೆ 

ಮರಕ್ಕೆ  ಹಗ್ಗ ಹಾಕಿ  ನಾಯಿಯ ಕೊರಳಿಗೆ ಒಂದು ಸುತ್ತು ಹಾಕಿದರು . ಎಂದು ನೋಡದ ನೋಟ ಅದು ! . ಚಿಕ್ಕಪ್ಪ ನೋವಿನಿಂದ ಹಗ್ಗವನ್ನ ಕೆಳಕ್ಕೆ ಎಳೆಯುತ್ತಲೇ ನಾಯಿಯು ತನ್ನ ಕೊನೆಊಸಿರು ಬಿಟ್ಟಿತು . ಹುಚ್ಚು ನಾಯಿಯನ್ನ ಹಾಗೆ ಬಿಟ್ಟರೆ ಯಾರಿಗೂ ಒಳ್ಳೇದಲ್ಲ ಅನ್ನುತಾ ನಿಟ್ಟಿಸಿರು ಬಿಟ್ಟರು ಚಿಕ್ಕಪ್ಪ . ನಾಯಿಯ ಶವವನ್ನ ಮರದಿಂದ ಸ್ವಲ್ಪ ದೂರದಲ್ಲಿ ಮಣ್ಣು ಮಾಡಲಾಯಿತು . ಅರೆ ತಿಳುವಳಿಕೆ ನನಗೆ ಆಗ;ಒಂದು ತಿಳಿಯಲಿಲ್ಲ.



ಕೆಂಪು ನಾಯಿ ಹೋದಮೇಲೆ ಮನೆಯಲ್ಲಿ ಯಾರು ನಾಯಿಯನ್ನ ಸಾಕುವ ಗೋಜಿಗೆ ಹೋಗಲಿಲ್ಲ . ಸುಮಾರು ನಾಲ್ಕು ವರ್ಷಗಳ ನಂತರ ನಮ್ಮ ನೆರೆಯ ಕುರುಬರ ಮಾಯಪ್ಪ ಅಜ್ಜ ಒಂದು ಬಿಳಿ ನಾಯಿ ಮರಿಯನ್ನ ಸಾಕಲು ಕೊಟ್ಟರು . ನಂಗಂತೂ ಎಲ್ಲಿಲ್ಲದ ಹುಮ್ಮಸ್ಸು !. ಅದರ ಜ್ಯೋತೆ ಆಡುತ್ತ ಬೆಳೆದೆ . ಅದು ನೋಡು ನೋಡುತ್ತಲೇ ಬೆಳೆದು ದೊಡ್ಡದಾಯಿತು . 

ಅದಕ್ಕೂ ಅದೇ ಕೆಂಪು ನಾಯಿಯ ಜವಾಬ್ದಾರಿ . ದನದ ಕೊಟ್ಟಿಗೆ ಹಾಗು ತೋಟ ಕಾಯುವಿಕೆ . ಸ್ವಲ್ಪ ಮಟ್ಟಿಗೆ ಕೆಂಪು ನಾಯಿಯ ನೆನಪನ್ನು ಅಳಿಸಿತು ಅನ್ನಲೇಬೇಕು . ಕೆಲವಂದು ಘಟನೆಗಳು ಕೆಂಪು ನಾಯಿಯ ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ . ನಾಯಿಯು ಸೊಗಸಾಗಿ ಬೆಳೆದಿತ್ತು . ದೂರದಿಂದಲೇ ನೋಡಿ ಗುರು ಹಿಡಿಯಬಹುತ್ತಿತ್ತು ಇದು ನಮ್ಮ ನಾಯಿಯೆಂದು . ಆದರೆ ದುರಾದೃಷ್ಟ ಅಂದ್ರೆ ಇದೆ ಇರಬೇಕು . ಆದಿನ ನಾಯಿಯನ್ನ ಎಲ್ಲಿ ನೋಡಿದರು ಸಿಗಲಿಲ್ಲ . "ಯಾರಿಗೆ ಯೇನ ಮಾಡಿದ್ವಿ ನಾವು ? ನಮ್ಮ ನಾಯಿಗೆ ವಿಷ ಹಾಕಿದರೂ !. ಅವ್ವ ಬೇಸರದಿಂದ ರೇಗಾಡುತ್ತಿತ್ತರು . ನಾನು ಬಿಡಲಿಲ್ಲ; ಗುಡ್ಡದ ಮೇಲೆ ಒಡಿ ಹೋಗಿ ನೋಡಿದೆ . ಒಂದು ತೆಗ್ಗಿನಲ್ಲಿ ಶವವಾಗಿ ಬಿದ್ದಿರುವುದನ್ನ ಕಂಡು ಹೃದಯ ತುಂಬಿ ಬಂತು . ನಾಯಿಯು ಅವರ ಇವರ ತೋಟಕ್ಕೆ ಹೋಗಿ ಹಸಿ ಗೋವಿನ ಜೋಳವನ್ನು ತಿನ್ನುತ್ತಿತ್ತಂತೆ . ಅದಕ್ಕೆ ಊಟಕ್ಕೆ ವಿಷ ಬೇರೆಯಿಸಿ  ಕೊಂದರಂತೆ. ಹೀಗೆ  ಗಾಳಿಸುದ್ದಿಯು ಅದು ಹೋದಮೇಲೆ ಹರದಾಡುತ್ತಿತ್ತು .


------------------------------------------------------------------------------------------------------


ಬಿಳಿ ನಾಯಿ ಮರೆಯಾದಮೇಲೆ ತೋಟದ ಮನೆಗೆ ಏನೋ ಕೊರತೆ ಎದ್ದು ಕಾಣುತ್ತಿತ್ತು. ಮನೆಯವರು ಮತ್ತೊಂದು ನಾಯಿಯನ್ನ ಸಾಕುವ ಉಸಾಬರಿಗೆ ಹೋಗಲಿಲ್ಲ . ಹಾಗೆ ದಿನ ಕಳೆದವು . 

 ರೈತಾಪಿ ಜನರು ಹೊಲ , ತೋಟ-ಗದ್ದೆ , ದನ-ಕರ ಇದೆ ಅವರ ಪ್ರಪಂಚ . ಮನೆಯಲ್ಲಿ ಎರಡು ಕೊಟ್ಟಿಗೆಗಳು . ಒಂದು ಕೊಟ್ಟಿಗೆ ಎಮ್ಮೆಗಳಿಗೆ ಆದರೆ ಇನ್ನೊಂದು ಕೊಟ್ಟಿಗೆ ಆಕಳುಗಳಿಗೆ . ಆಕಾಲದಲ್ಲಿ ನಮ್ಮಜ್ಜಿಗೆ ತವರು ಮನೆಯವರು ಬಳುವಳಿಯಾಗಿ ಒಂದು ಎಮ್ಮೆ ಕರು ಕೊಟ್ಟಿಂದ್ದರಂತೆ. ಅದರಿಂದ ನಾಲ್ಕಾರು ಸೂಲುಗಳನ್ನ ಎಯಿಸಿಕೊಂಡು ಅದರಿಂದ ಬಂದ ಹೈನಿನಿಂದ ತಮ್ಮ ಆರು ಮಕ್ಕಳನ್ನು ಸಾಕಿದರಂತೆ  ನಮ್ಮ ಅಜ್ಜಿ . 


--to be continued





Sunday, 3 April 2022

Ugadi ಯುಗಾದಿ

ಮಾವಿನ ಹುಳಿ , 

ಬೇವಿನ ಕಹಿ ,

ಬೆಲ್ಲದ  ಸಿಹಿ ,

ಹೊಂಗೆಯ  ನೆರಳು 

ಭೂತಾಯಿಯ  ಸೊಬಗು  . 

ಯುಗಾದಿ ಮರಳಿ ಬರುತಿದೆ , 

ಹೊಸ ವರುಷದ ನೆನಪು ತರುತಿದೆ .

ಯುಗಾದಿಯ  ಹಬ್ಬದ ಶುಭಾಷಯಗಳು 

—Prashant Gs 

Tuesday, 22 October 2019

ಹೇಮ್ಮರದ ಕಥೇ

ಅದೊಂದು ಜೀವ . ಆಕಾಶದೇತ್ತರಕ್ಕೇ ಬೇಳೇದು , ತನ್ನ ಸುತ್ತ ಇರುವ ಬಯಲನ್ನು ಬಯಲು ಮಾಡಿ ದೂರದೂದ್ದಕ್ಕೂ ಬಾಹುಗಳನ್ನು ಚಾಚಿ , ಸಕಲ ಜೀವಿಗಳನ್ನು ಅಪ್ಪೀಕೊಳ್ಳಲೇಂದೇ ಆಗಾಗ ಗಾಳಿ ಬೀಸಿದಾಗ ನಯವಾಗಿ ಆ ಕಡೇ ಬಾಗಿ , ಮತ್ತೇ ಈ ಕಡೇ ಹೊರಳಿ , ಕೈ ಬೀಸಿ , ಕೈ ಸನ್ನೇ ಮಾಡಿ ಮಾಯೇ ಮಾಡುತ್ತಿದೇ . ಹೌದು ಅದೊಂದು ಹೇಮ್ಮರ ! . ಆ ಭಾಗದ ಹಿರಿ ತಲೇ ;ಮರದವ್ವ .
ಆ ಮರದವ್ವ ದೂರದೂದ್ದಕ್ಕೂ ರೇ0ಬೇಗಳನ್ನ ಚಾಚಿ , ಊಯ್ಯಾಲೇಯಂತೇ ತೂಗೂತ್ತ ಸಾಗಿರುವ ಮೋಡಗಳನ್ನ ಮೋಡಿ ಮಾಡಿ, ಅವುಗಳ ಮನ ಕರಗಿಸಿ , ಸ್ವಾತಿ ಮುತ್ತುಗಳನ್ನ ಮಳೇ ಹನಿಯಾಗಿ ಧರೇಗೇ ಧಾರಾಕಾರವಾಗಿ ಸುರೀಸುತ್ತೀದ್ದಳು . ಅವಳ ಅನನ್ಯ ಕೊಡುಗೇಯನ್ನ ಮಾನವ ಅರಿಯದೇ , ಮರದ ಕೇಳಗೇ ಗುಡಿ ಕಟ್ಟಿ , ಮಳೇಗಾಗಿ ಕಾನದ ದೇವರಿಗೇ ಮೊರೇ ಇಡುತ್ತಿದ್ದ .
ತವರು ಮನೇಯಲ್ಲಿ ಹೇಗೇ ಆನಂದ ಊಲ್ಲಾಸಗಳಿಗೇ ಮಿತಿ ಇಲ್ಲವೋ ಹಾಗೇ ಈ ಮರದವ್ವನ ಸೂರು ಕೂಡ . ಸಹಸ್ರ ಜೀವಿಗಳಿಗೇ ತಾಣ . ಕಣ್ಣಿಗೇ ಕಾನಿದಸ್ಟು ;ಅದರ ಮಿತಿ ಮೀರೀದರೇ ಮತ್ತೊ0ದಿಷ್ಟು .
ಅವಳ ತ0ಪಾದ ನೇರಳು , ಬೇಸಿಗೇ ಸುಡುವ ಬಿಸಿಲಿನಲ್ಲಿ ನವಿಲುಗಳಿಗೇ ನಾಟ್ಯ ಮ0ಟಪ . ರಾಮಾಯಣದ ರಾಮ ಸೇತುವೇಯ ನೇನಪು ತಟ್ಟಂತೇ ತರುವ ಅಳಿಲುಗಳು . ಅಲ್ಲಿಂದ ಇಲ್ಲಿಗೇ ಸರ್ರ0ತೇ ಓಡಿ ತಕ್ಷಣ ನಿಂತು , ತನ್ನ ಮುಂದಿನ ಯೇರಡು ಕಾಲುಗಳಲ್ಲಿ ಯೇನೋ ತಿಂದಂತೇ ಮಾಡಿ , ಮತ್ತೇ ಅರೇ ಕ್ಷಣಕ್ಕೇ ಬೇರೇ ಕಡೇ ಓಟ ! ! .
ಆಳೇತ್ತರಕ್ಕೇ ನಿಂತಿರುವ ಕೇ0ಪು ಕೋಟೇ . ಅಹಮ್ಮೀಗೇ ಕಟ್ಟಿದಲ್ಲ ; ನೇಲೇಊರಲೂ . ಇದು ಗೇದ್ದಲುಗಳ ಲೋಕ . ಮರದವ್ವಗೇ ಇವು ಕಂಟಕಗಳೇ . ಯೇಲ್ಲರೀಗು ಸಮಪಾಲು , ಸಮಬಾಳು ಅನ್ನೋದು ಅವಳ ಅಂತರಂಗದ ಮಾತು .
ತಲೇ ಮೇಲೇತ್ತಿ ನೋಡಿದರೇ ಪಕ್ಷಿಗಳ ಲೋಕ . ಆಕಾರದಲ್ಲಿ , ಕೊರಳಿನನಾದದಲ್ಲೀ, ಹಾರುವ ಮಿತಿಯಲ್ಲಿ , ತಿನ್ನುವ ಆಹಾರದಲ್ಲಿ , ಕಟ್ಟುವ ಗೂಡಿನಲ್ಲಿ , ಅನೇಕತೇಗಳನ್ನ ಹೊಂದಿದ್ದರು ತಮ್ಮ ಬಾಳ್ವೇಯಲ್ಲಿ ಯೇಕತೇಯಿಂದ ಜೀವನ ಸಾಗೀಸುತ್ತೀದ್ದವು . ಮಾನವ ಒಂದೇ ಆದರೂ , ಭೇದ ಭಾವ ತೋರಿ , ಭೇದಿ ಮಾತ್ರೇಯನ್ನು ನುಂಗಿ ಭಾದೇ ತಾಳಲಾರದೇ ಬಯಲು ಕಡೇ ಚಂಬು ಹಿಡಿದು ತೀನುಕುತ್ತೀದ್ದಾನೇ .
" ಮಾನವ ಜ್ಯಾತೀ ತಾನೊಂದು ವಲ0 " ಆದಿ ಕವಿ ಪ0ಪ ಹೇಳಿದ್ದು ಮಾನವರಿಗೇ ಆದರೂ ಅದು ಇಲ್ಲಿ ಮರದವ್ವನ ಮಕ್ಕಳಿಗೇ ಹೋಲುತ್ತೀತ್ತೀ .
ಗಿಳಿಗಳು ಗಿಲಿ , ಗಿಲಿ ಮಾತಾಡುತ್ತ ಸವಿದ ಹಣ್ಣುಗಳ ನೇನೇದು ಮೇಲುಕು ಹಾಕುತ್ತೀದ್ದವು . ಕಾ , ಕಾ ಚೀರುತ್ತ ನಮಗೇನು ತಿನ್ನಲು ಸಿಗಲಿಲ್ಲವೇಂದು ಬಂದುಗಳ ಜೊತೇ ಕಷ್ಟ ತೋರೀಕೋಳ್ಳುತಿರುವ ಕಾಗೇಗಳು . ಯಾವಾಗಲು ಗುಟುರು ಹಾಕುತ್ತ ಯಾವಾಗಲೋ ಬಂದು ಹಾದು ಹೋಗುವ ಹದ್ದಿನ ಹಿಡಿತ ತಪ್ಪಿಸಿಕೊಳ್ಳಲು , ಜೋಪಾನವಾಗಿ ಕುಳಿತಿರು ಬೇಳವ. "ಹಗಲು ಯಾಕಾದರೂ ಬರುತ್ತೋ!!?" ಪೊಟರೇಯಲ್ಲಿ ಅವೀತು ಜೊ0ಪು ಹೋಗುತ್ತ ಬಡಬಡಿಸುತ್ತಿರುವ ಗೂಬೇ. ಯೇಳ್ಳು ಹುರಿದ ಹಾಗೇ ಚಿಲಿ ಪೀಲಿ ಅನ್ನುವ ಮೈನಾಗಳೂ, ಲೋಕದ ಪರಿವೇ ಇಲ್ಲದೇ ಮೈ ಮರೇತೀವೇ .
ಆಗ ಸಂತಾನೋತ್ಪತ್ತೀಯ ಸಮಯ . ಮೊದಲಿನಷ್ಟು ವಠಾರದಲ್ಲಿ ಗದ್ದಲಗಳು ಇಲ್ಲದಿದ್ದರೂ , ಕೋಗಿಲೇ ಮಾತ್ರ ಯಾವುದೋ ಒಂದು ಅಪರೂಪದ ಗಳಿಗೇಗೇ ಕಾಯೀತ್ತೀತ್ತು . ಹಲವಾರು ಪಕ್ಷಿಗಳು ಸಾಗರದಾಟಿ ಹಾರಿ , ಸಾಹಸ ತೋರಿ, ಮು0ಬರುವ ಪೀಳಿಗೇಗೇ ಅವಿರತ ಹೋರಾಡುತ್ತಿದ್ದವು . ಮರದವ್ವ ಯೇಲ್ಲವನ್ನೂ ಬಲ್ಲವಳು . ಇದರಲ್ಲೂ ಅವಳ ಒಳಿತನ್ನು ಕಂಡಿದ್ದಳು . ಪ್ರತೀ ಹಾರುವ ಜೀವಿಯು ಅವಳ ಸಂತಾನ ಬೇಳೇಯಲು ಸಹಕಾರ ಸದ್ದಿಲ್ಲದೇ ನಡೇಯುತ್ತೀತ್ತು .
ಯೇಲ್ಲರೂ ಬೇರೇ ಕಡೇ ಹೋದರೇ ಕಾಗೇ ಮಾತ್ರ ಇದ್ದಲ್ಲಿಯೇ , ಇದ್ದಷ್ಟರಲ್ಲಿಯೇ ಅರಮನೇ ಕಟ್ಟುತ್ತಿತ್ತು .ಕೋಗಿಲೇ ತನ್ನ ಗೂಡಿಗೇ ಬಂದು ಹೋದದ್ದು ನೋಡಿ, ದಾಯಾದಿಗಳ ಕಲಹದಂತೇ ಜಗಳಕ್ಕೇ ಇಳಿಯಿತು .
ಕೋಗಿಲೇಗೇ ಒಂದೇ ಊಪಾಯ ಆದಷ್ಟು ಅದರಿಂದ ದೂರು ಊಳಿಯುವುದು .ಶಬ್ದವೇದಿ ಬಾನು ಬಿಟ್ಟಂತೇ, ಕಾಗೇ, ಪೊದೇ , ಪೊಟರೇ ತೂರಿ , ಕೋಗಿಲೇಯನ್ನ ಕೂಕ್ಕಲೂ ತವಕೀಸುತ್ತೀತ್ತು . ಸಿಗದ ಕೋಗಿಲೇ ಬೇನ್ನು ಬಿಟ್ಟು, ತನ್ನ ಗೂಡಿಗೇ ಬ0ದಾಗ , ತನ್ನ ಮೊಟ್ಟೇ ಯಾವುದು , ಕೋಗಿಲೇ ಮೊಟ್ಟೇ ಯಾವುದೇಂದು ಅರಿವೂ ಇರದೇ , ಗಾನ ಕೋಗಿಲೇಯ ಮರಿಯನ್ನ ಸಲಹುತ್ತೀತ್ತು . ಕೋಗಿಲೇಯ ಇ0ಪಾದ ಕಂಠ ಸೀರೀಗೇ ಮರುಳಾದ ನಾವು , ಕಾಗೇಯ ದ್ವನಿಯನ್ನ ಶಪಿಸುತ್ತೇವೇ . ಗೂಡು ಕೊಟ್ಟದ್ದು , ತನ್ನ ಕಂದಮ್ಮಗಳ0ತೇ ಸಾಕುತ್ತಿದ್ದ ಕಾಗೇಯನ್ನ ಮರೇಯಲು ಹೇಗೇ ಸಾದ್ಯ ! ! ! ? .
ಸಡಗರ ಸ0ಭ್ರಮದಲ್ಲಿ ಸಂಗೀತ ಇಲ್ಲದ್ದೀದ್ದರೇ ಹೇಗೇ ! ? .
ಹಿಂಡು ಹಿಂಡಾಗಿ ಬಂದು , ಸಾದ್ಯವಾದಸ್ಟು ರಸ ಹೀರಿ , ಹೂವುಗಳಿಗೇ ನೋವಾಗದೇ ದು0ಬೀಗಳು ಮುಂದೇ ಸಾಗುತ್ತೀದ್ದವು . ದು0ಬೀಗಳ ಝ್ಹೇ0ಕಾರವ ಕೇಳಿ , ಪಾತರಗಿತ್ತಿಗಳೂ , ರಂಗು ರಂಗಿನ ರೇಕ್ಕೇಗಳನು ಬಡೇಯುತ್ತ ತಲೇದುಗುತ್ತೀದ್ದವು . ರಮ್ಯ ಲೋಕಕ್ಕೇ ಕಾರಣ ಕರ್ತಳು ಮರದೇವ್ವ . ಇದನೇಲ್ಲ ನೋಡಿ ಬಯಲೋಳು ಬೇರಗಾದಳು .
ಪಕ್ಕದ ಹಳ್ಳಿಯೊಂದರಲ್ಲಿ ಮಗು ಜನಿಸಿತೇಂದು ಅದರ ಅಜ್ಜ , ಹಳ್ಳ ಕೊಳ್ಳ ಹೊಕ್ಕು , ಬಾಗಿ ಕೂತು , ಆಕಡೇ ಈಕಡೇ ಯೇನೋ ಹುಡುಕುತ್ತ , ವಡ್ಡು , ಬದಿಗಳಲ್ಲಿನ್ನ ಮುಳ್ಳು ಕ0ಟಿಗಳನ್ನ ಸವರುತ್ತ ಮುಂದೇ ಸಾಗಿ , ಸಾಕಾಗಿ , ಬಳಲಿ ಬೇಂಡಾಗಿ , ದೂರದಿಂದ ಬಂದು ಮಹಾ ಮರದ ಕೇಳಗೇ ವಿಶ್ರಮಿಸಿದ . ಹಸುಗೂಸೀನ ಪುಟ್ಟ ತುಟಿಗೇ ಜೀನು ಸವರಲೇಂದೇ ಜೇನು ಗೂಡನ್ನು ಹುಡುಕುತ್ತ , ತನ್ನ ಗೂಡನ್ನು ಬಿಟ್ಟಿದ್ದ . ತಾಯಿ ಮೊಲೇಹಾಲು ಹೇಜ್ಜೇನಿಗಿಂತ ಹೇಚ್ಚು ಅನ್ನೋದು ಈ ಹಿರಿಯರಿಗೇ ಗೊತ್ತಿಲ್ಲದೇ , ಹಸಿರು ಮರು ಸೃಷ್ಟಿಗೇ ಪರಾಗ ಸ್ಪರ್ಶ ಮಾಡಿ , ಪರಿಸರದ ಸಮತೋಲನಕ್ಕೇ ಶ್ರಮೀಸುವ, ಶ್ರಮಜೀವಿಗಳ ಗೂಡಿಗೇ ಬೇಂಕಿ ಇಡಲು ಬಂದಿದ್ದ . ಒಂದು ಜೊ0ಪು ನಿದ್ದೇ ಮಾಡಿ , ಕಣ್ಣು ಬಿಡುವುದೇ ತಡ , ಹುಳುಗಳ ಗೂ0ಪು ನೋಡಿ, ಇದು ಜೇನುಗೂಡೇ0ದು ಮನದಟ್ಟು ಮಾಡಿಕೊಂಡವನಂತೇ ಮೇಲೇ ಯೇದ್ದೂ , ಬಂದ ಕೇಲಸ ಮುಗಿಯಿತೇಂದು ಬರ ಬರ ಮರವೇರೀದ . ಕಂಬಳಿ ಹೊತ್ತು ಹುಳುಗಳನ್ನ ಓಡಿಸಿ ಜೇನು ಬಿಡಿಸಿದ್ದರೇ , ಹುಳುಗಳಿಗೇ ಕೇಡಿರಲಿಲ್ಲ . ಬೇಂಕಿ ಜ್ವಾಲೇಗೇ ರೇಕ್ಕೇ ಸುಟ್ಟುಕೊಂಡು ತಮಗೇನಾಯಿತೇ0ಬ ಅರಿವಿಲ್ಲದೇ , ಭೂತಾಯಿಯ ಮಡಿಲಲ್ಲಿ ಊದುರೀದವು . ಈ ಕ್ರೂರತೇಗೇ ತನಗೇ ಜೇನು ಬೇಡೇ0ದು ಹಸುಳೇ ನಿದ್ದೇಯಿಂದೇದ್ದು ಚಟ್ಟನೇ ಚೀರೀತು ; ಆಕ್ರಂದಿಸೀತು . ಅದರವ್ವ ಯಾರ ದ್ರುಸ್ಟಿಯಾಯಿತೇಂದು ನೀವಾಳಿಸೀದಳು . ತನ್ನ ಮನೇಯ ಮಕ್ಕಳ ಗೂಡೋ0ದು ಮನುಷ್ಯನ ಅಟ್ಟಹಾಸಕ್ಕೇ ಅಳಸಿ ಹೋದದ್ದನ್ನು ನೋಡಿ , ರೋಸಿ ಹೋಗಿ , ಬೇಸರದ ನಿಟ್ಟೂಸೀರು ಬಿಟ್ಟಳು ಮರದವ್ವ .
ಹುತ್ತ ಕಟ್ಟಿದ್ದು ಗೇದ್ದಲ ಹುಳು , ಆದರೂ ಹಾವೋಂದು ಅದರಲ್ಲಿ ಮನೇ ಮಾಡಿತು . ಗಿಳಿಯ ಮುದ್ದು ಮರಿಗಳು ತಾಯಿಯ ಬರುವೀಕೇಗೇ ಕಾಯುತೀರಲು , ಕೇಳಗಿನಿಂದ ಬುಸುಗುಡುವ ಶಬ್ದವು ಅವುಗಳ ಯೇದೇ ಬಡಿತ ಜೋರಾಗೀಸೀತು . ಕಷ್ಟದಲ್ಲಿ ಕಾಯೂವರಾರೂ ! ? .
ಕಿರುಚುವ ಕಾಗೇ ಯೇಲ್ಲರೀಗು ಕಷ್ಟ ಕೊಟ್ಟರು , ಹಾವನ್ನು ಕೂಕ್ಕಲೂ ಹಿಂಜರಿಯಲಿಲ್ಲ . ಬಲವಾದ ತೀವೀತಕ್ಕೇ, ಹಾವು ಯೇಲ್ಲಿಂದ ಬಂದಿತ್ತೋ ಅಲ್ಲಿಗೇ ಬಿದ್ದು , ಮರುಕ್ಷಣ ಅಲ್ಲಿಂದ ಸರಿದು ದೂರ ಹೋಯಿತು . ಇದನೇಲ್ಲ ಕಂಡ ತಾಯಿ ಗಿಳಿಯು ತನ್ನ ಸಂಗಡಿಗರೋ0ದಿಗೇ ಸಾಲು ಸಾಲಾಗಿ ಬಾನೇತ್ತರದೀ ಹಾರಿ ಕಾಗೇಗೇ ವಂದನೇ ತಿಳಿಸಿತು .
ಸದ್ಯದ ಶೋಧನೇಯ ಪ್ರಕಾರ , ನಮ್ಮ ಸೌರ್ರ್ಯಮಂಡಲದಲ್ಲಿ 8 ಗ್ರಹಗಳಿದ್ದು , ಅದರಲ್ಲಿ ಭೂಮಿ ಜೀವಿಗಳಿಗೇ ನೇಲೇಯಾಗಿದೇ . ಈ ನೀಲಿ ಗ್ರಹದಲ್ಲಿ , ಪ್ರತಿಯೊಂದು ಜೀವಿಯು ತನ್ನದೇಯಾದ ಜೀವಿತಾವಧಿಯಲ್ಲಿ ಬದುಕಿ, ಪ್ರಕೃತೀಯ ಜೀವವೈವಿದ್ಯೇತೇಯನ್ನ ಕಾಪಾಡುತ್ತವೇ . ಮಾನವ ಹೀಗೇಕೇ ! ! ? ? . ಹೋದ ಜಾಗದಲ್ಲಿ ಹೊಗೇ , ಪ್ಲಾಸ್ಟಿಕ್ಕು , ಹೊಲಸು . ಮಿತಿ ಮೀರಿದ ವೀವೇಕತನ , ಅವಿವೇಕಿತನವಾಗಿದೇ .ಇವನಿಂದ , ಊಂಡ ಮನೇಗೇ ಕಣ್ಣ ಹಾಕುವ ಕೇಲಸ ಬಿಟ್ಟು ಬಿಡದೇ ನಡಿತಾಯಿದೇ. ಹಾವಾದರು ಇಲಿ , ಹೇಗ್ಗಣಗಳ ಜನಸಂಕ್ಯೇಯನ್ನ ನಿಯಂತ್ರೀಸುತ್ತೇ .ಹೀನ ಮಾನವ ತನ್ನನ್ನು ತಾನು ನಿಯಂತ್ರೀಸೀದರೇ ಸಾಕಾಗಿದೇ! ! ! ! . ಇವನಿಗೇ ಮಯ್ಯಲ್ಲಾ ವಿಷ .
ಗಿಳಿಗಳ ಪಾಲಿಗೇ ನಡೇದುದೇಲ್ಲ ಸುಕಾಂತ್ಯವಾದರೂ ಮರದೇವ್ವಗೇ ಮುಂದೊಂದು ದಿನ ಬರುವ ಕೇಟ್ಟ ಗಳಿಗೇಗೇ ಮುನ್ಸೂಚನೇಯಂತೇ ಕಂಡಿತು .
ಅದೊಂದು ದಿನ ಒಂದಿಬ್ಬರು , ತಮಗೇ ತೋಚೀದನ್ನ ಹೇಳುತ್ತ , ವಾದಿಸುತ್ತ , ಮನ ಬಂದಂತೇ ಕೂಗಾಡುತ್ತಿದ್ದರು .ಅವರ ಮಾತಿನಲ್ಲಿ ಹಿಡಿತವಿಲ್ಲ;ನಡೇಯಲ್ಲು ಸಹ . ತೂರಾಡುತ್ತಿದ್ದರು , ತಪ್ಪು ಹೇಜ್ಜೇ ಇಡುತ್ತಿದ್ದರು . ಊರಿನ ಹಿರಿಯರನ್ನ ಕರೇಯಿಸಿ ನ್ಯಾಯ ಕೇಳತೀನಿ ಒಬ್ಬ ಅಂದ್ರೇ , ಇನ್ನೊಬ್ಬ " ಹೋಗ ಹೋಗು ನಿಂಗೇ ಬೇಕಾದವರ ಕಾಲು ಬೀಳು , ನಾನಂತೂ ನ್ಯಾಯಾಲಯಕ್ಕೇ ಹೋಗಿ ಧಾವೇ ಹೂಡ್ತೀನಿ " ಅನ್ನುತ ಕಾನೂನಿನ ಅರಿವೂ ತನಗೇಸ್ಟಿದೇಯೇಂದು ಹೂಂಕರೀಸುತ್ತೀದ್ದ .
ಕಾರಣ ಇಷ್ಟೇ ಹೊಲದ ಬದಿ ತನಗೇ ಸೇರಿದ್ದೇಂದು ಅವರ ಅವರ ವಾದ . ಇಬ್ಬರು ಸಾವಿರ ಚಟಗಳ ಸರದಾರರು . ಮನೇಯಲ್ಲಿದ್ದ , ಮನೇಯ ಒಡತಿಯ ಮೈ ಮೇಲಿದ್ದ ಯೇಲ್ಲವನ್ನೂ ಸರಾಯಿ ನುಂಗಿ ನೀರು ಕೂಡಿದಿತ್ತು .ಜೂಜು ಹುಡುಕುತ್ತಿತು ಊಳಿದ್ದೀದ್ದನ್ನ . ಮಕ್ಕಳಿಗೇ ಒಳ್ಳೇ ಅಪ್ಪನಲ್ಲ ;ಮಡದಿಗೇ ಒಳ್ಳೇ ಗಂಡನಲ್ಲ.
ಮರುದಿನ ಹೊಲ ಮೋಜಣಿ ಮಾಡೋರು ಬಂದು, ಗೇರೇ ಯೇಳೇದೂ, ಸಮಸ್ಯೇಗೇ ಪರಿಹಾರ ಕೊಟ್ಟು, ಸೀಮೇ ಕಲ್ಲು ಹಾಕಿಸಿ ಹೋಗುತ್ತಾರೇ . ತರುವಾಯ , ಬದಿ ಮತ್ತು ಅದರ ಮೇಲೇ ಬೇಳೇದ ಹೇಮ್ಮರ ಒಬ್ಬನ ಪಾಲಾಗೂತ್ತದೇ .
ಬಯಲು ಸೀಮೇಯಲ್ಲೀ ಮಲೇನಾಡಿನ ಸೊಬಗು ಯೇಲ್ಲಿಂದ ಬಂದಿತ್ತು ಹೇಳಿ . ಮಳೇಗಾಲದಲ್ಲಿ ಸ್ವಲ್ಪ ಮಟ್ಟಿಗೇ ಹಸಿರು ಕಾಣಿಸಿಗೋದು ಹಳ್ಳ ಕೊಳ್ಳ , ಭಾವಿ ಸುತ್ತ ಮುತ್ತ , ಬದಿಗಳ ಮೇಲೇ . ಬೇವಿನ ಮರ , ಹುಣಸೇ ಮರ , ಮಾವಿನ ಮರ , ಹೇಚ್ಚು ಕಾಣಿಸಿಕೊಂಡರೇ ಅಲ್ಲೊಂದು ಇಲ್ಲೊಂದು ಇಚಲ ಮರ . ಇವನ್ನ ಬಿಟ್ರೇ ಮತ್ತಷ್ಟು ಪಾಲು ಬಳ್ಳಾರಿ ಜಾಲಿಗೇ .ನವಿಲುಗಳಿಗೇ ಈ ವನ ಸಿರಿ ಸಾಕಿತ್ತು ಬೇಳಗ್ಗೇ , ಸಂಜೇ "ಮ್ಯ0ವೌ ಮ್ಯ0ವೌ" ಅನ್ನುತ ದೊಡ್ಡ ದ್ವನಿಯಲ್ಲಿ ಕೂಗಲು . "ಮನುಷ್ಯರೇ ನಾವು ಇಲ್ಲಿನ ವಾಸಿಗಳು ,ನಿಮ್ಮ ಜ್ಯೋತೇ ಬದುಕುತ್ತೀದ್ದೀವೀ . ನಮ್ಮ ಮನೇಯಂತಿರುವ ಹಸಿರು ಸಿರಿಯನ್ನ ಊಳಿಸಿ " ಅನ್ನುತ್ತಲೇ, ಶುಭ ರಾತ್ರಿ ಕೋರುತ್ತೀದ್ದವು .
ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದವ , ಮರದವ್ವೇಯ ಜೀವ ತೇಗೇಯಲು ಹೇಸಲ್ಲೀಲ್ಲ . ಒಂದು ದಿನ ಆಳೇತ್ತರದ ಗುಂಡಿಯನ್ನು ಮರದ ಸುತ್ತ ತೇಗೇದ .ಆಗಲೇ ಗೊತ್ತಾಯಿತು ಇನ್ನು ಊಳಿದೀರೋದು ಕೇಲವೇ ದಿನ . ವಲಸೇ ಹೋಗೀರೋ ಹಕ್ಕಿಗಳನ್ನ ನೋಡುವಾಸೇ ಮರದೇವ್ವೇಯ ಕೊನೇಯ ಆಸೇಯಂತೇ ಕಂಡಿತು .
ಮರಿ ಅಳಿಲುಗಳು ಮೇಲಿಂದ ಕೇಳಕ್ಕೇ , ಕೇಳಗಿ0ದ ಮೇಲಕ್ಕೇ, ಹತ್ತಿ ಇಳಿದು ಗುಂಡಿಯಲ್ಲಿ ಆಡುತ್ತಿದ್ದವು . ಆದರೇ ಮಾನವನ ಕೇಟ್ಟ ವಾಸನೇ ಅವುಗಳ ಹಿರಿಯರಿಗೇ ಗೊತ್ತಾಗದೇ ಇರಲಿಲ್ಲ . ಅವೇಲ್ಲ ಸೇರಿ ಮಮ್ಮಲ ಮರುಗುತ್ತೀದ್ದವು .
ಅಲ್ಲೇ ಬಿದ್ದಿದ್ದ ಕೇ0ಪು ಕಲ್ಲಿಗೇ ಕೊಡಲಿಯನ್ನು ಮಸೀಯುತ್ತೀದ್ದ0ತೇಯೇ, ಹೊಸದಾಗಿ ಚಿಗುರಿದ ಚಿಗುರು ಬಾಡಿತು . ಒಂದೊಂದು ಕೊಡಲಿಯ ಹೊಡೇತಕ್ಕೇ , ಅವಳ ರೊದನೇಗಳು ಬೇರಿನಿಂದ ಬೇರೀಗೇ ಹರಿದು ದೂರದಿ ಬೇಳೇದ ಸಂಭಂಧಿಗಳಿಗೇ ಮುಟ್ಟಿತು . ಅವಳ ನೋವಿಗೇ ಸ್ಪಂದಿಸಿದ ಕೂಡಲೇ ಭೂಮಿಯ ಮೇಲ್ಪದರು ಕ0ಪೀಸೀತು . ಹೊಡೇತಗಳು ಆಳಹೋದಷ್ಟು ಅವಳು ಮೂರ್ಛೇ ಹೋಗಿ ತನ್ನ ಬಾಲ್ಯದ ನೇನಪುಗಳಿಗೇ ಜಾರಿದಳು . ಹಕ್ಕಿಯಿಂದ ಬಿದ್ದ ಬೀಜ , ಬೀಜದಿಂದ ಮೊಳಕೇ , ಮೊಳಕೇಯಿಂದ ಸಸಿ , ಸಸಿಯಿಂದ ಮರ , ಮರದಿಂದ ಹೇಮ್ಮರ, ಹೇಮ್ಮರದಿಂದ ಮರದೇವ್ವೇ . ಮೊಡ ತಣಿಸಿ ಮಳೇ ತಂದದ್ದು , ಕೇರೇಗಳು ತು0ಬಿ ಹರಿದದ್ದು , ಹಕ್ಕಿಗಳ ಅಪ್ಪುಗೇ, ಬಯಲು ಸೀಮೇಗೇ ಹಸಿರು ತಂದದ್ದು , ದನ ಕರುಗಳು ಮೇದದ್ದು . ಹೀಗೇ ತನ್ನ ಮುನ್ನೂರು ಶತಮಾನದ ಜೀವನ ಅವಳ ಕಣ್ಮುಂದೇ ಬಂದು ಹೋಯಿತು . ಕೊನೇಯ ಹೊಡೇತಕ್ಕೇ ನೇಲಸಮವಾದಳು . ಹಕ್ಕಿಗಳ ಕೂಗು ಮುಗಿಲು ಮುಟ್ಟಿತು . ಮುನ್ನುರೀನ ಬಾಳು , ಮೂರುದಿನದಲಿ ಮಣ್ಣುಸೇರಿತು .
ಕಟ್ಟಿದ ಗೂಡು , ಆಗತಾನೇ ಹಾಕಿದ ಮೊಟ್ಟೇಗಳು , ರೇಕ್ಕೇ ಬಲಿತು ಹಾರುವ ಹುಮ್ಮಸ್ಸೀನಲ್ಲೀರುವ ಮರಿ ಹಕ್ಕಿಗಳು, ಧರೇಗೇ ಊರುಳೀದವು .
ಮೋಡಗಳು ಬಂದವು, ನಿಲ್ಲದೇ ಹೋದವು . ಕಪ್ಪೇಗಳ ಮದುವೇ , ಕಾಣದ ದೇವರಿಗೇ ಪೂಜೇ , ಪುನಸ್ಕಾರಗಳು ಅವಿರತ ನಡೇಯುತ್ತೀದ್ದವು . ದೇವರ ಘOಟೇಯ ಶಬ್ದವು ಹಕ್ಕಿಗಳ ಕೂಗನು ನುಂಗಿತು .
ವಲಸೇಯಿಂದ ಮರಳಿ ಬಂದ ಹಕ್ಕಿಗಳು , ತಮ್ಮ ತಮ್ಮ ಮರಿಗಳಿಗೇ , ಮರೇದೇವ್ವ ಬಾಳಿದ ಜಾಗದಲ್ಲಿ ನಿಂತು , ತಮ್ಮಲ್ಲಿ ಬೇರೇತು ಹೋದ ಜೀವದ ಕಥೇ ಹೇಳುತ್ತಿವೇ .
                                                Prashant Gs

Joke

ಬೇಂಗಳೂರಿನಿಂದ mr . ಮಾದನು ಹೇಗಲಿಗೇ ಚೀಲ , ಕೈಯಲ್ಲಿ ಹೇಲ್ಮೇಟ ಹಿಡ್ಕೊಂಡು ಊರಿಗೇ ಹೋದ. ಅವ್ವ "ಹೇಲ್ಮೇಟು ಯಾಕೋ ತಮ್ಮಾ ಅಂದಳು" . ಅದಕ್ಕೇ ಅವನು "bouncer bike " ನಿಂದ VRL stop ಬಂದೇ ಅದಕ್ಕೇ ಅಂದ . ಗಂಡನನ್ನು ಹುಡುಕುತ್ತ " ರೀ ಯೇಲ್ಲೀ ಹೋದ್ರೀ ! ! ? ಈ bouncer bike ಅಂದ್ರೇನು" ಜೋರಾಗಿ ಕೇಳುತ್ತ ಅಡುಗೇ ಮನೇಗೇ ಹೋದಳು .
" ಮಹಾ ನಗರಿಯ ನಿತ್ಯ ನೂತನ ತಂತ್ರಜ್ಞಾನದ ಪರ್ವ "

ಗಾಂಧಿ ಟೋಪಿ . ನಮಗೇಷ್ಟು ಗೊತ್ತು . . ? ?


ನಾವು ಘತಕಾಲದ ಕುರುಹುಗಳು . ನಮ್ಮ ವೇಷ ಭೂಷಣ , ಆಚಾರ ವಿಚಾರಗಳು , ಹಬ್ಬಗಳು ನಡೇದುಕೊಂಡು ಬಂದOತಹ ಸಂಪ್ರದಾಯದ ಗುರುತುಗಳನ್ನ ತೋರಿಸುತ್ತವೇ . ತೊಡುವ ಊಡುಗೇಗಳ ಮೂಲ ನೋಡಿದರೇ , ಅವೇಲ್ಲ ಮಾನವರು ನೇಲೀಸೀರೋ ಆಯಾ ಭಾಗದ ಭೌಗೋಳಿಕ ಲಕ್ಷಣಗಳ ಮೇಲೇ ಅವಲ0ಬಿತವಾಗೀದ್ದವು ಹೊರತು ಮತ್ತೇನಲ್ಲ .
ಆಯಾಕಾಲಕ್ಕೇ ತಕ್ಕಂತೇ ನಾ ನಾ ಬಗೇ ಬಗೇಯ ಊಡುಪುಗಳು . ಇನ್ನೂ ಕೇಲವು ಕಾಲಾತೀತವಾಗಿ ಮುಂದುವರೇದುಕೊಂಡು ಬಂದು , ಬೇರೇ ಬೇರೇ ಧರ್ಮದ ಥಳಹದಿಯ ಮೇಲೇ ನಿಂತಿರುವ0ತಹವು.
ನಮ್ಮೂರೀನ ಹಿರಿಯರು ಹೇಳೋರು, ಪ್ರತೀ ಹತ್ತು ವರ್ಷಕ್ಕೇ ಸಮಾಜದಲ್ಲಿ ಬದುಕುವ ರೀತಿ ಬದಲಾಗುತ್ತದೇಯಂತೇ .ಕಾಲಕ್ಕೇ ತಕ್ಕಂತೇ ವೇಷ ಭೂಷಣ ;ಆಹಾರ ವಿಹಾರ .
"ಪರಿವರ್ತನೇ ಜಗದ ನಿಯಮ" ಅನ್ನೋದನ್ನ ಬೇರೇ ವಯಸ್ಸೀನವರ ಜ್ಯೋತೇ ಚರ್ಚೇಗೇ ಇಳಿದಾಗ ಇದರ ಅನೂಭವವಾಗೋದು . ಅದು ಬೇಡ ಅಂದ್ರೇ ಬೇಳಗಿನ ಜಾವ ಲಗುವಾಗಿ ನಡಿಗೇಗೇ ಬಂದಿರುವ ಹಿರಿಯರ ಜ್ಯೋತೇ ಹೇಜ್ಜೇ ಹಾಕಿದಾಗ . ಅವರು ಮಾತಿನ ನಡುವೇ " ಅಯ್ಯೋ ಬಿಡ್ರಿ ! ! ನಮ್ಮ ಕಾಲದಲ್ಲಿ ಹಾಗಿತ್ತು , ಹೀಗಿತ್ತು " ಅನ್ನುತ ಗತಿಸಿದ ಕಾಲವನ್ನು ನೇನೇಯುತ್ತಿರುತ್ತಾರೇ . ವರ್ತಮಾನದ ಜ್ಯೋತೇ ಭೂತಕಾಲದ ಅರಿವು ಇದ್ದರೇ ಬದಲಾವನೇಯನ್ನ ಗಮನಿಸಬಹುದು . ಮನೇಯಲ್ಲಿ ಅಜ್ಜ , ಅಜ್ಜಿ ಇದ್ರೇ ಮೊಮ್ಮಕ್ಕಳ ಬಾಲ್ಯ ನಂದನವನ . " ಹಳೇ ಬೇರು , ಹೊಸ ಚೂಗುರು ಕೂಡಿರಲು ಮರ ಸೊಬಗು " ಅನ್ನುವ ಹಾಗೇ ಜೀವನವು ಹೊಸದು , ಹಳೇದು ಕಾಣತ್ತೇ ! .
ಭಾರತ ಬ್ರಿಟಿಷರ ದಾಸ್ಯದಲ್ಲಿ ಸೀಕ್ಕೂ ನಲಗುತ್ತೀದ್ದಾಗ , ಮಹಾತ್ಮಾ ಗಾಂದಿಯವರು ಸ್ವದೇಶಿ ಚಳುವಳಿಗೇ ನಾಂದಿ ಹಾಡಿದರು . ನಮ್ಮ ದೇಶದಲ್ಲಿ , ನಮ್ಮ ಜನರು ಊತ್ಪಾದೀಸೀದ ಊಡುಪುಗಳನ್ನ ಊಡೋದು ; ಯೂರೋಪೀನಿಂದ ಬಂದ ಊಡುಪುಗಳನ್ನು ಧಿಕ್ಕರಿಸುವುದೇ ಇದರ ಮೂಲ ಗುರಿ . ಇವತ್ತಿಗೂ ನಾವು imported ವಸ್ತುಗಳು ಅಂದ್ರೇ ಆ !!! ಅಂತ ಬಾಯಿ ತೇಗೇಯೋದು ಬಿಟ್ಟಿಲ್ಲ .ಈಗಲೂ ಹಿತ್ತಲ ಗಿಡ ಮದ್ದಲ್ಲ ನಮಗೇ .
ಸುಮಾರು 1920 ನೇ ಇಸವಿಯಲ್ಲಿ ಹೋರಾಟದ ತೀವ್ರತೇ ಹೇಚ್ಚಿಸಲೇಂದೇ ಗಾಂದಿಯವರು ಸ್ವತಃ ಖಾದಿ ಬಟ್ಟೇ ತೊಟ್ಟು , ತಲೇ ಮೇಲೇ ಬಿಳೀ ಟೋಪಿ ಹಾಕಿಕೊಳ್ಳುತ್ತಾರೇ . ಅದೇ ಟೋಪಿ ಗಾಂದಿ ಟೋಪಿಯಾಗಿ ಹೇಸರು ಪಡೇದು ಪ್ರಸಿದ್ದಿಗೇ ಬರುತ್ತದೇ . ಕೇಲವೇ ವರುಷ ಧರೀಸೀಧರು , ನೇಹರು ತರುವಾಯ ಅದನ್ನ ಯಾವಗಲೂ ಬಳಸೂತ್ತಾರೇ . ಬಹಳ ಕಡೇ ಅದನ್ನ ನೇಹರು ಟೋಪಿ ಅನ್ನೋದು ಇದೇ . ಈ ಟೋಪಿಯನ್ನ ಧರಿಸಿರುವವರ ಮೇಲೇ ಬ್ರಿಟಿಷರು ಶಿಕ್ಷೇಗೇ ಗುರಿ ಪಡಿಸಿದ್ದನ್ನ ಇತಿಹಾಸ ಹೇಳುತ್ತದೇ .
ಸ್ವಂತಂತ್ರ ಪೂರ್ವದಲ್ಲಿ ಇದು ದೇಶವ್ಯಾಪ್ತಿಯಾಗುತ್ತಾ , ಸ್ವತಂತ್ರ ನಂತರದ ದಿನಗಳಲ್ಲಿ ಕೇಲವು ಪ್ರದೇಶಗಳಿಗೇ ಮಾತ್ರ ಸೀಮಿತವಾಗುತ್ತದೇ . ಸದ್ಯಕಂತು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಇನ್ನೂ ಜನಜೀವನದಲ್ಲಿ ನೋಡಬಹುದು .ಈ ಟೋಪಿಯೂ ಸ್ವಾತಂತ್ರ ಹೋರಾಟದ ಕುರುಹು . ಇದು ಧರ್ಮ , ಜ್ಯಾತೀ , ಪಂಗಡ ಹಾಗೂ ಒಂದು ಭಾಗದ ಜನರ ಹಿಂದಿನ ಪರ0ಪರೇಯಲ್ಲ . ಬಿಡುಗಡೇಗೇ ಫಣ ತೊಟ್ಟು, ಊಟ್ಟ0ತಹ ಟೋಪಿ ಇದು ! ! .
ಈ ಟೋಪಿಯು ತನ್ನದೇ ಆದ ವಿಶೇಷ ಸ್ತಾನ ಮಾನ ಪಡೇದಿದೇ . ದೇವರ ಆರಾಧನೇಯಲ್ಲಿ ಹೇಗೇಲ್ಲ ನಿಯಮ , ನಿಟ್ಟು ಪಾಲೀಸುವೇವೋ ಹಾಗೇಯೇ ಇದಕ್ಕೂ ಸಹ . ಇದರಲ್ಲಿ ಒಂದು ವ್ಯತ್ಯಾಸ ಕಂಡುಹಿಡಿಯಬಹುದು . ದೈವದಲ್ಲಿ ಭಯವಿದ್ದರೇ , ಟೋಪಿ ತೋಡುವುದರಲ್ಲಿ ದೇಶ ಭಕ್ತಿಯಿದೇ . ಯಾರೇ ಇರಲಿ , ದೇಶ , ವಿದೇಶದಲ್ಲಿ ಓದಿ ಬ್ರಹ್ಮ ಪದವಿ ಪಡೇದಿದ್ದರು, ಕೇಲವು ವಿಶೇಷ ಸಂಧರ್ಭಗಳಲ್ಲಿ ಇದನ್ನ ಹಾಕಿಕೊಂಡು ತಮಗೇ ಗೊತ್ತಿಲ್ಲದೇ , ಸ್ವಾತಂತ್ರ ಸಂಗ್ರಾಮದ ಘಟನೇಗಳನ್ನ ಮರು ಸೃಷ್ಟಿ ಮಾಡುವರು . ಮದುವೇಯ ಸಮಯದಲ್ಲ0ತು ಮಜಾನ ಬೇರೇ . ಕೋಟು , ಸೂಟು , ಬೂಟು ಹಾಕಿಕೊಂಡು ವರ ನಿಂತಿರಬೇಕು , ಅಷ್ಟರಲ್ಲಿ ಯಾರದೋ ಅಪ್ಪನೇಮೇರೇಗೇ ಒಂದು ಟೋಫಿ ತಲೇಯಮೇಲೇ ಬಂದು ಬೀಳತ್ತೇ . ಮತ್ತೇ ಅದೇ ಸ್ವಾತಂತ್ರ್ಯ ಹೋರಾಟದ ನೇನಪು. ವಿಪರ್ಯಾಸ ಎನೇಂದರೇ, ಇದು ಮದುಮಗನ ಸ್ವಂತಂತ್ರ್ಯ ಕೀತ್ತುಕೋಳ್ಳುವ ಮದುವೇಯ ಸಮಾರಂಭ .
ಪ್ರತೀದೀನ ತೊಡುವವರನ್ನ ನೋಡಬೇಕು , ಯೇನು ಶಿಸ್ತು , ಬದ್ದು ;ಶಿಸ್ತಿನ ಸಿಪಾಯಿಗಳು . ಬೇಳಿಗ್ಗೇ ಜಳಕಾ ಮಾಡಿ , ಕನ್ನಡಿ ಮುಂದೇ ನಿಂತು , ತಿದ್ದಿ ತೀಡಿ , ತಲೇಯ ಮೇಲೇ ಕಿರೀಟದಂತೇ ಇಟ್ಕೋಳ್ಳುವುದೇ ಒಂದು ಗಮ್ಮತ್ತು .ಹಾಗೇ ಬೇಡವಾದಾಗ , ತೇಗೇದು , ಸರಿಯಾಗಿ ಮಡಿಕೇ ಮಾಡಿ ಜೇಬಿನಲ್ಲಿ ಇಟ್ಟು ಕೊಳ್ಳೋದು ಇನ್ನೊಂದು ಬಗೇ . ಇದೋOತರಹ ಅಗಸ್ಟ 15 ಸ್ವಂತಂತ್ರ ದಿನಾಚರಣೇಯ ಬಾವುಟ ಹಾರಿಸಿದ ಹಾಗೇ . ಹಾರೀಸೋದು ಮಾತ್ರ ಅಲ್ಲ , ಸಂಜೇ ಆದ ಮೇಲೇ ಗೌರವ ಕೊಟ್ಟು ಕೇಳಗೇ ಇಳಿಸ ಬೇಕು . ಟೋಪಿಯ ವಿಚಾರಕ್ಕೇ ಬಂದಾಗ ಹಾಗೇಯೇ ಕಂಡರೂ , ಒಂದೇ ದಿನಕ್ಕೇ ಸೀಮಿತವಲ್ಲ . ದಿನOಪ್ರತೀ ನಡಿಯೋದು .ಇದನ್ನ ಅಪ್ಪಿ ತಪ್ಪಿ ನೇಲಕ್ಕೇ ಇಟ್ಟರೇ ಆ ಮನುಷ್ಯನ ಮಾನ ಹೊದಂತೇ ಸರಿ .
ಗಾಂದಿ ಟೋಪಿಯೂ ಇನ್ನೇನು ಬದಲಾವಣೇಯ ಪರದೀಯಲ್ಲೀ ಹಿಂದೇ ಸರಿಯಿತು ಅನ್ನುವುದುರೋಳಗೇ , ಮತ್ತೇ ದೇಹಲಿಯ ರಾಮ ಲೀಲಾ ಮೈದಾನದಲ್ಲೀ , ಬ್ರಷ್ಟಾಚಾರ ವಿರುದ್ದ ಹೋರಾಡಿದ ಅಣ್ಣ ಹಜಾರೇಯ ಶಿರದ ಮೇಲೇ ಹೊನ್ನ ಕಳಶದಂತೇ ಮಿಂಚಿತು . ಈ ಹೋರಾಟದ ತನುಜಾತೇಯಂತೇ "ಆಮ ಆದ್ಮಿ " ಪಕ್ಷ ಹುಟ್ಟಿ , ದೇಹಲಿಯ ಚುಕ್ಕಾಣಿ ಹಿಡಿಯಿತು . ಈ ಪಕ್ಷವು ಟೋಪಿಯ ಬಳಕೇಯಲ್ಲಿ ಹಿಂದೇ ಬಿಳಲಿಲ್ಲ .
ನಮ್ಮ ಬೇಂಗಳೂರಿನ H. ನರಸೀoಮಯ್ಯನವರು, ಜೀವನದ ಕೊನೇ ಊಸೀರು ಇರೋವರೇಗೂ ಗಾಂಧಿ ತೋಪಿಯನ್ನ ಮರೇಯಲಿಲ್ಲ.


Prashant Gs

ಚಂದಿರ ತಂದ ನಿದ್ದೆ

ಆಹಾ ಹ ಹಾ ಹಾ !!! ಮೈನಡುಗಿತು , ತOಪು ಗಾಳಿ ಬೀಸೀತೇಂದು.
ಚOದ್ರಮ ನಕ್ಕನು , ಹಾಲು ಬೇಳದಿಂಗಳು ಚೇಲ್ಲಿತು .
ಮಿಂಚು ಹುಳು ಬಂದು ಹೋದಂತೇ , ಆಗಸದ ಬಹು ದೂರದಲಿ ಚುಕ್ಕಿಗಳು ಕಣ್ಣುಗಳನ್ನ ಪಿಳುಕಿಸೀದವು.
ಮನಸ್ಸು ಹಗುರಾಯೀತು , ನಿದ್ದೇ ಆವರಿಸಿತು .

------------Prashant Gs